Photo credit : PTI 

ದುಬೈ: ಮೌಂಟ್ ಮಾಂಗನುಯಿಯಲ್ಲಿ ನ. 15ರಂದು ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ಗಾಗಿ ಭಾರತ ತಂಡಕ್ಕೆ ಪಂದ್ಯ ಶುಲ್ಕದ ಶೇ. 35ರಷ್ಟು ದಂಡ ವಿಧಿಸಲಾಗಿದೆ.

ಸಮಯದ ರಿಯಾಯಿತಿಗಳನ್ನು ಪರಿಗಣಿಸಿದ ನಂತರವೂ ಶ್ರೇಯಸ್ ಅಯ್ಯರ್ ನೇತೃತ್ವದ ತಂಡವು ನಿಗದಿತ ಗುರಿಗಿಂತ ಏಳು ಓವರ್‌ಗಳಷ್ಟು ಹಿಂದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಐಸಿಸಿಯ ಉನ್ನತ ಪಂದ್ಯ ರೆಫರಿಗಳ ಮಂಡಳಿಯ ಸದಸ್ಯ ರಂಜನ್ ಮದುಗಲೆ ಬುಧವಾರ ಈ ದಂಡವನ್ನು ವಿಧಿಸಿದ್ದಾರೆ.

ಭಾರತ ತಂಡವು ಐದನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 3-1 ಅಂತರದಿಂದ ವಶಪಡಿಸಿಕೊಂಡಿತು.

ಕನಿಷ್ಠ ಓವರ್-ರೇಟ್ ತಪ್ಪುಗಳಿಗೆ ಸಂಬಂಧಿಸಿದ ಐಸಿಸಿ ನೀತಿ ಸಂಹಿತೆಯ (ಆಟಗಾರರು ಮತ್ತು ಸಹಾಯಕ ಸಿಬ್ಬಂದಿ) ಆರ್ಟಿಕಲ್ 2.22ರ ಪ್ರಕಾರ, ನಿಗದಿತ ಸಮಯದೊಳಗೆ ಬೌಲ್ ಮಾಡಲು ಸಾಧ್ಯವಾಗದ ಪ್ರತಿ ಓವರ್‌ಗೆ ಆಟಗಾರರಿಗೆ ಅವರ ಪಂದ್ಯ ಶುಲ್ಕದ ಶೇ. 5ರಷ್ಟು ದಂಡ ವಿಧಿಸಲಾಗುತ್ತದೆ (ಇದು ಗರಿಷ್ಠ ಶೇ. 50ರ ಮಿತಿಗೆ ಒಳಪಟ್ಟಿರುತ್ತದೆ).

‘‘ಅಯ್ಯರ್ ತಪ್ಪನ್ನು ಒಪ್ಪಿಕೊಂಡು, ಪ್ರಸ್ತಾಪಿಸಲಾದ ದಂಡವನ್ನು ಸ್ವೀಕರಿಸಿರುವುದರಿಂದ ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ’’ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸತೀಶ್ ಶೆಟ್ಟಿ , ವಾರ್ತಾಭಾರತಿ

contributor