×
Ad

ಸ್ಟೀಫನ್ ಫ್ಲೆಮಿಂಗ್ ರೊಂದಿಗಿನ ದೀರ್ಘ ನಂಟು ಕಡಿದುಕೊಂಡ ಸಿಎಸ್‌ಕೆ : ಹೇಮಂಗ್ ಬದಾನಿ ನೂತನ ಮುಖ್ಯ ಕೋಚ್?

Update: 2026-07-13 23:07 IST

Photo Credit : BCCI

ಹೊಸದಿಲ್ಲಿ, ಜು.13: ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ತಂಡವು ಮುಖ್ಯ ಕೋಚ್ ಆಗಿದ್ದ ಸ್ಟೀಫನ್ ಫ್ಲೆಮಿಂಗ್ ಅವರಿಂದ ಬೇರ್ಪಟ್ಟಿದ್ದು, ನ್ಯೂಝಿಲ್ಯಾಂಡ್ನ ಮಾಜಿ ನಾಯಕನೊಂದಿಗಿನ ದೀರ್ಘಕಾಲದ ಒಡನಾಟವನ್ನು ಕೊನೆಗೊಳಿಸಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ.ಕಾಮ್’ ವರದಿ ಮಾಡಿದೆ.

ಫ್ರಾಂಚೈಸಿ ತನ್ನ ಕ್ರಿಕೆಟ್ ಕಾರ್ಯಾಚರಣೆಯನ್ನು ಪರಿಶೀಲಿಸುತ್ತಿದೆ. ಭಾರತದ ಮಾಜಿ ಬ್ಯಾಟರ್ ಹೇಮಂಗ್ ಬದಾನಿ ಅವರನ್ನು ಕೋಚಿಂಗ್ ತಂಡಕ್ಕೆ ಸೇರುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಫ್ರಾಂಚೈಸಿಯ ಉನ್ನತ ಅಧಿಕಾರಿಗಳು ಸದ್ಯ ಡಲ್ಲಾಸ್ನಲ್ಲಿದ್ದಾರೆ. ಕಳೆದ ಕೆಲವು ಋತುಗಳ ಪ್ರದರ್ಶನ ಪರಿಶೀಲಿಸಿ, ಮುಂದಿನ ಹಾದಿ ಯೋಜಿಸಲಿದ್ದಾರೆ.

ಇಡೀ ಕೋಚಿಂಗ್ ತಂಡದ ಬಗ್ಗೆ ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಎನ್. ಶ್ರೀನಿವಾಸನ್ ಪುತ್ರಿ ರೂಪಾ ಗುರುನಾಥ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್‌ನ ಪೂರ್ಣಕಾಲಿಕ ನಿರ್ದೇಶಕರು ಪ್ರಮುಖ ನಿರ್ಧಾರಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.

ಕ್ರಿಕೆಟ್‌ಗೆ ಸಂಬಂಧಿಸಿದ ಚರ್ಚೆಗಳು ಮುಂದುವರಿದಿದೆ. ಭಾರತದ ಮಾಜಿ ಕ್ರಿಕೆಟಿಗ ಹೇಮಂಗ್ ಬದಾನಿ ಕಳೆದ ಎರಡು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿದ್ದರು. ಸಿಎಸ್‌ಕೆ ತಂಡ ಸೇರುವ ವಿಶ್ವಾಸದಲ್ಲಿದ್ದಾರೆ. ಬದಾನಿ ಮಾರ್ಗದರ್ಶನದಲ್ಲಿ ಡೆಲ್ಲಿ ತಂಡವು 2025 ಹಾಗೂ 2026ರ ಆವೃತ್ತಿಗಳ ಐಪಿಎಲ್‌ನಲ್ಲಿ ಕ್ರಮವಾಗಿ ಐದನೇ ಹಾಗೂ ಆರನೇ ಸ್ಥಾನ ಪಡೆದಿದೆ.

ಫ್ಲೆಮಿಂಗ್ ಎರಡು ದಶಕಗಳಿಂದ ಸಿಎಸ್ಕೆಯೊಂದಿಗೆ ಒಡನಾಟ ಹೊಂದಿದ್ದಾರೆ. 2008ರಲ್ಲಿ ಆಟಗಾರನಾಗಿದ್ದ ಅವರು 2009ರಿಂದ ಮುಖ್ಯ ಕೋಚ್ ಆಗಿದ್ದಾರೆ. 2016 ಹಾಗೂ 2017ರಲ್ಲಿ ಸಿಎಸ್ಕೆ ನಿಷೇಧಗೊಂಡಾಗ ಪುಣೆ ಸೂಪರ್ ಜಯಂಟ್ಸ್ ತಂಡದ ಕೋಚ್ ಆಗಿದ್ದರು. ಫ್ಲೆಮಿಂಗ್ ಮಾರ್ಗದರ್ಶನದಲ್ಲಿ ಸಿಎಸ್‌ಕೆ ತಂಡವು ಐಪಿಎಲ್‌ನಲ್ಲಿ 10 ಬಾರಿ ಫೈನಲ್‌ಗೆ ತಲುಪಿದೆ. ಐದು ಬಾರಿ ಪ್ರಶಸ್ತಿ ಜಯಿಸಿದೆ. ಒಂದು ಬಾರಿ ಚಾಂಪಿಯನ್ಸ್ ಲೀಗ್ ಗೆದ್ದಿದೆ.

ಕಳೆದ ಕೆಲವು ವರ್ಷಗಳಿಂದ ಸಿಎಸ್ಕೆ ತಂಡವು ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ. 2024ರಲ್ಲಿ ಪ್ಲೇ ಆಫ್ನಿಂದ ವಂಚಿತವಾದ ನಂತರ ಕಳೆದ ಎರಡು ವರ್ಷಗಳಲ್ಲಿ 10ನೇ ಹಾಗೂ 8ನೇ ಸ್ಥಾನ ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News