×
Ad

ಕಳಂಕಿತ ಕ್ರಿಕೆಟ್ ಲೀಗ್ ಜತೆ ಸಂಬಂಧ: ತಿಲಕ್ ವರ್ಮಾ, ಸಿರಾಜ್ ಗೆ ನೋಟಿಸ್

Update: 2026-06-19 07:04 IST

ತಿಲಕ್‌ ವರ್ಮಾ Photo: x.com/CricketNDTV

ಹೈದರಾಬಾದ್: ಪ್ರಸ್ತಾವಿತ ಟಿಜಿ20 ಲೀಗ್ ಜತೆ ಗುರುತಿಸಿಕೊಂಡ ಕಾರಣಕ್ಕೆ ನಟ ವಿಜಯ್ ದೇವರಕೊಂಡ ಮತ್ತು ವೆಂಕಟೇಶ್ ದಗ್ಗುಬಾಟಿ, ಕ್ರಿಕೆಟಿಗರಾದ ಮೊಹ್ಮದ್ ಸಿರಾಜ್, ಅಂಬಟಿ ರಾಯುಡು ಮತ್ತು ತಿಲಕ್ ವರ್ಮಾ ಅವರಿಗೆ ತೆಲಂಗಾಣ ಕ್ರಿಕೆಟ್ ಅಸೋಸಿಯೇಶನ್ ನೋಟಿಸ್ ಜಾರಿ ಮಾಡಿದೆ.

ಈ ಟೂರ್ನಿಯನ್ನು ಭಾರತೀಯ ಕ್ರಿಕೆಟ್ ಮಂಡಳಿಯ ಕಡ್ಡಾಯ ಅನುಮೋದನೆ ಪಡೆಯದೇ ಆಯೋಜಿಸಲಾಗುತ್ತಿದೆ ಎಂಬ ಕಾರಣಕ್ಕೆ ಕಾನೂನುಬಾಹಿರ ಟೂರ್ನಿಯಲ್ಲಿ ಗುರುತಿಸಿಕೊಂಡ ಆರೋಪದಲ್ಲಿ ಈ ನೋಟಿಸ್ ನೀಡಲಾಗಿದೆ.

ಈ ಅನುಮೋದನೆ ಪಡೆಯದ ಮತ್ತು ಕಾನೂನುಬಾಹಿರ ಟೂರ್ನಿಯನ್ನು ಪ್ರಚಾರ ಮಾಡುತ್ತಿರುವುದಕ್ಕೆ ಸೆಲೆಬ್ರಿಟಿಗಳ ವಿರುದ್ಧ ನೋಟಿಸ್ ನೀಡಲಾಗಿದೆ ಎಂದು ಟಿಸಿಎ ಪ್ರಧಾನ ಕಾರ್ಯದರ್ಶಿ ಗುರವ ರೆಡ್ಡಿ ಹೇಳಿದ್ದಾರೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಈ ಟೂರ್ನಿ ಆಯೋಜಿಸಿದೆ.

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್ ಬಿಸಿಸಿಐ ಒಪ್ಪಿಗೆ ಪಡೆಯದೇ ಕಾರ್ಪೊರೇಟ್ ಸಂಸ್ಥೆಗಳ ಜತೆ ವ್ಯವಹರಿಸುತ್ತಿದೆ ಹಾಗೂ ಬಿಸಿಸಿಐ ಅನುಮತಿ ಇಲ್ಲದೆ ಟಿಜಿ20 ಲೀಗ್ ನಡೆಸುತ್ತಿರುವುದು ಅಪರಾಧ ಎಂದು ಅವರು ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News