Commonwealth Games| ಪಾಕಿಸ್ತಾನದ ಮಹಿಳಾ ಬಾಕ್ಸರ್‌ಗೆ ಮೇರಿ ಕೋಮ್ ಸ್ಫೂರ್ತಿ!

Update: 2026-08-01 22:08 IST

 ಮೇರಿ ಕೋಮ್ | Photo Credit : X

ಗ್ಲಾಸ್ಗೊ: ಭಾರತದ ಬಾಕ್ಸಿಂಗ್ ರಾಣಿ ಮೇರಿ ಕೋಮ್ ತನ್ನ ದೇಶದ ಮಾತ್ರವಲ್ಲ ನೆರೆಯ ಪಾಕಿಸ್ತಾನದ ಕ್ರೀಡಾಪಟುವಿಗೂ ಸ್ಫೂರ್ತಿಯ ಸೆಲೆಯಾಗಿದ್ದಾರೆ.

ಪಾಕಿಸ್ತಾನದ ಮೊದಲ ಮಹಿಳಾ ಕಾಮನ್‌ವೆಲ್ತ್ ಗೇಮ್ಸ್ ಮೆಡಲಿಸ್ಟ್ ಫಾತಿಮಾ ಝಹ್ರಾ ಅವರು ಗ್ಲಾಸ್ಗೊ ಗೇಮ್ಸ್‌ನ ಮಹಿಳೆಯರ 60 ಕೆಜಿ ತೂಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿದರು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫಾತಿಮಾ ಅವರು ಮೇರಿ ಕೋಮ್‌ರನ್ನು ರೋಲ್ ಮಾಡಲ್ ಆಗಿ ಸ್ವೀಕರಿಸಿದ್ದಾರೆ.

‘‘ನನಗೆ ಭಾರತದ ಮೇರಿ ಕೋಮ್ ಸ್ಫೂರ್ತಿಯಾಗಿದ್ದಾರೆ. ಅವರ ಜೀವನಾಧರಿತ ಚಲನಚಿತ್ರವನ್ನು ನೋಡುತ್ತಾ ಬಾಕ್ಸಿಂಗ್‌ನತ್ತ ಒಲವು ತೋರಿದೆ. ಅವರ ಮೇಲೆ ನನಗೆ ಸಾಕಷ್ಟು ಗೌರವವಿದೆ. ದೇವರ ದಯೆಯಿಂದ ಒಂದು ದಿನ ಅವರಂತೆಯೇ ಆಗುವ ಬಯಕೆ ಇದೆ. ನಾನು ಅವರನ್ನು ಭೇಟಿಯಾಗುವ ವಿಶ್ವಾಸದಲ್ಲಿದ್ದೇನೆ’’ ಎಂದು 22ರ ವಯಸ್ಸಿನ ಫಾತಿಮಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News