ಸಾಂದರ್ಭಿಕ ಚಿತ್ರ | PC : Gemini AI

ಬೆಂಗಳೂರು : 2026-27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢ ಶಾಲಾ ವಿಭಾಗದಿಂದ 11 ಶಿಕ್ಷಕರು ಆಯ್ಕೆಯಾಗಿದ್ದಾರೆ.

ಸಿ.ಉಮಾ, ಬಸಪ್ಪ ಪರಪ್ಪ ಪಾಟೀಲ, ಅಶೋಕ, ಸುರೇಶ.ಕೆ, ಹಣಮಂತ ಕಲ್ಲಪ್ಪ ಕಾತರಕಿ, ಉಷಾ ವಿ.ನಾಯಕ, ಮಸ್ತಾನ್ ವಲಿ, ಪ್ರಭಾವತಿ ಬಾಳಪ್ಪಾ ಹಾಲೆನ್ನವರ, ಸರೋಜಮ್ಮ, ನಿಂಗಪ್ಪಾ, ರತ್ನಮ್ಮ ಎನ್.ಎಂ, ನೇಮಣ್ಣ ಬಮ್ಮಣ್ಣ ಜಮಖಂಡಿ, ರಾಮಚಂದ್ರ ಈ. ನಾಯ್ಕ, ಮಾಲಿನಿ ಎಂ., ಕುಮಾರನಾಯ್ಕ ಬಿ.ಡಿ, ಕೃಷ್ಣಮೂರ್ತಿ ಕೆ.ಎಸ್., ಮಲ್ಲಿಕಾರ್ಜುನ ಬಡಿಗೇರ, ಪ್ರೇಮಕುಮಾರ್ ವಿ.ಎಸ್., ದುರಗಪ್ಪ ಎಚ್., ಮೈಲಾರಪ್ಪ ಬೂದಿಹಾಳ ಅವರು ಪ್ರಾಥಮಿಕ ಶಾಲಾ ವಿಭಾಗದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಿರಾದಾರ ಸಿದ್ದಪ್ಪ ವೀರಭದ್ರಪ್ಪ, ಶೈನಾಕುಮಾರಿ ಎಂ., ಕುಬೇರನಾಯ್ಕ ಬಿ., ನೀಲಕಂಠ ಗಾವಂಕರ್, ವಿ.ವೆಂಕಟೇಶ, ಮಮತಾ ಆರ್.ನಾಯ್ಕ, ರೋಶನ್ ಅಲೆಗ್ಸಾಂಡರ್ ಪಿಂಟೊ, ಜಯಶೀಲ, ಮಥಾಯಿ ಟಿ., ಜಯಪ್ಪ ಕೆ.ಟಿ., ಆನಂದ ಮಾದೇವ ಝಂಡೇ ಅವರು ಪ್ರೌಢ ಶಾಲಾ ವಿಭಾಗದಲ್ಲಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರಿಗೆ ತಲಾ 25 ಸಾವಿರ ರೂ. ನಗದು ಪುರಸ್ಕಾರ ನೀಡಲಾಗುತ್ತದೆ. ಪ್ರಶಸ್ತಿಯನ್ನು ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಸೆ.5ರಂದು ನಡೆಯುವ ರಾಜ್ಯಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

 

ಉತ್ತಮ ಪ್ರಾಂಶುಪಾಲರು, ಉಪನ್ಯಾಸಕರ ಪ್ರಶಸ್ತಿ

ಶ್ರೀಕಂಠಯ್ಯ, ಜೈರಾಮ್ ಬಿ. ಅವರು ರಾಜ್ಯಮಟ್ಟದ ಉತ್ತಮ ಪ್ರಾಂಶುಪಾಲರು ಪ್ರಶಸ್ತಿಗೆ ಹಾಗೂ ಶ್ರೀನಿವಾಸ ಡಿ., ಸೌಮ್ಯ ಎಲ್., ಪ್ರಮೀಳಾ ಎಚ್., ವಾಸು ಎಚ್.ಬಿ, ನಝೀಮಾ ಜಮಷೇದ್ ಖಾನ್ ಪಠಾಣ, ನಿಂಗಪ್ಪ ಕುರುಬರ, ಇಬ್ರಾಹಿಂ ಎಂ., ಸವಿತ ಬಿ. ಅವರು ರಾಜ್ಯಮಟ್ಟದ ಉತ್ತಮ ಉಪನ್ಯಾಸಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

 

ಉತ್ತಮ ಶಾಲಾ ಪ್ರಶಸ್ತಿ: ಶಾಲೆಗಳಲ್ಲಿನ ದಾಖಲಾತಿ, ಜಿಲ್ಲಾ ತಂಡಗಳು ನೀಡಿದ ಅಂಕಗಳು ಹಾಗೂ ಎಸ್ಸೆಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಪರಿಗಣಿಸಿ, ಮಲೆನಾಡ ಗಾಂಧಿ ಗೋವಿಂದೇಗೌಡ ಎಚ್.ಜಿ., ಅವರ ಹೆಸರಿನಲ್ಲಿ ನೀಡಲಾಗುವ ‘ಉತ್ತಮ ಶಾಲಾ ಪ್ರಶಸ್ತಿ’ಗೆ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ಹಳಿಯಾಳ ತಾಲೂಕಿನ ಶಾಸಕರ ಸರಕಾರಿ ಮಾದರಿ ಶಾಲೆ, ಪ್ರೌಢ ಶಾಲಾ ವಿಭಾಗದಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿಯ ಸರಕಾರಿ ಪ್ರೌಢಶಾಲೆ ಆಯ್ಕೆಯಾಗಿವೆ.

 

‘ಉನ್ನತ ಶಿಕ್ಷಣದ ಕನಸು ಹೊತ್ತ ಪಿಯು ವಿದ್ಯಾರ್ಥಿಗಳಿಗೆ ಅಪಾರ ತಾಳ್ಮೆ, ಪ್ರೀತಿ ಮತ್ತು ನಿಷ್ಠೆಯಿಂದ ಪಾಠ ಮಾಡಿ, ಅವರ ಭವಿಷ್ಯ ರೂಪಿಸುತ್ತಿರುವ ಸರಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ, ಉಪನ್ಯಾಸಕರಿಗೆ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಗೌರವ ಸಮರ್ಪಿಸುವುದು ಹೆಮ್ಮೆಯ ವಿಷಯ. ಈ ಬಾರಿ ಸರಕಾರಿ, ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಪ್ರಾಂಶುಪಾಲರು ಮತ್ತು ಎಂಟು ಮಂದಿ ಉಪನ್ಯಾಸಕರನ್ನು ರಾಜ್ಯಮಟ್ಟದ ‘ಉತ್ತಮ ಪ್ರಶಸ್ತಿ’ಗೆ ಆಯ್ಕೆಮಾಡಲಾಗಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಾಳೆ(ಸೆ.5) ನಡೆಯಲಿರುವ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ರಾಜ್ಯಮಟ್ಟದ ಈ ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಪ್ರಾಂಶುಪಾಲರಿಗೆ ಮತ್ತು ಉಪನ್ಯಾಸಕರಿಗೆ ಅಭಿನಂದನೆಗಳು. ನಿಮ್ಮ ಈ ಸಾಧನೆ, ಶಿಕ್ಷಣ ಕ್ಷೇತ್ರಕ್ಕೆ ನೀವು ನೀಡುತ್ತಿರುವ ಕೊಡುಗೆ ಎಲ್ಲರಿಗೂ ಮಾದರಿಯಾಗಲಿ’

-ಮಧು ಬಂಗಾರಪ್ಪ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor