ರಾಜ್ಯಾದ್ಯಂತ ಶೇ.90.26ರಷ್ಟು ಸಮೀಕ್ಷೆ ಪೂರ್ಣ
Update: 2025-10-13 21:21 IST
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣೀಕ ಸಮೀಕ್ಷೆ ನಡೆಯುತ್ತಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ ಶೇ.90.26ರಷ್ಟು ಸಮೀಕ್ಷೆಯು ಪೂರ್ಣಗೊಂಡಿದ್ದು, ಒಟ್ಟು 4,93,49,806 ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗವು ಮಾಹಿತಿ ನೀಡಿದೆ.
ರಾಜ್ಯದಲ್ಲಿ ಒಟ್ಟು ಮನೆಗಳ ಗುರಿ 1,47,88,831 ಆಗಿದ್ದು, ಸೋಮವಾರ ಒಂದೇ ದಿನ 1,96,685 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಇದುವರೆಗೆ 1,33,70,651 ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಇನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 39,82,335 ಮನೆಗಳ ಗುರಿ ಇದ್ದು, 13,17,176 ಮನೆಗಳ ಸಮೀಕ್ಷೆ ಮುಗಿದಿದೆ ಎಂದು ಆಯೋಗವು ತಿಳಿಸಿದೆ.