TUMKUR | ಲಾರಿ - ಕಾರು ಮಧ್ಯೆ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಮೃತ್ಯು
Update: 2026-01-26 10:50 IST
ತುಮಕೂರು: ಲಾರಿಗೆ ಹಿಂಬದಿಯಿಂದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರು ತಾಲೂಕು ಕೋರ ಪೊಲೀಸ್ ಠಾಣಾ ವ್ಯಾಪ್ತಿಯ ನೆಲಹಾಳ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂದು ಬೆಳಗ್ಗೆ ಆರು ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಕಾರಿನಲ್ಲಿದ್ದ ಉತ್ತರ ಪ್ರದೇಶ ಆಗ್ರಾ ನಿವಾಸಿ ಅನಿಕೇತ್(25), ಆಂಧ್ರ ಪ್ರದೇಶ ರಾಜ್ಯ ಸನ್ಮುಕ್ತಿ(35) ಹಾಗೂ ಪಂಜಾಬ್ ಜಲಂಧರ್ ನ ಅಬೀರ್(25) ಎಂದು ಗುರುತಿಸಲಾಗಿದೆ.
ಗಾಯಾಳುಗಳಾದ ಆನೇಕಲ್ ನ ತಿರುಪಳಿ ನಿವಾಸಿ ವಿರೇಶ್, ಪಶ್ಚಿಮ ಬಂಗಾಳ ನಿವಾಸಿಗಳಾದ ಸಿಂಚಿತಾ, ಸಿದ್ಧಾರ್ಥ, ಕೃತಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.