×
Ad

ಅಚ್ಯುತಾನಂದನ್ ನ್ಯಾಯದ ಪರ ದೃಢ ಧ್ವನಿಯಾಗಿದ್ದರು: ಸಿಎಂ ಸಿದ್ದರಾಮಯ್ಯ

Update: 2025-07-22 21:59 IST

ವಿ.ಎಸ್.ಅಚ್ಯುತಾನಂದನ್ , ಸಿದ್ದರಾಮಯ್ಯ | PTI

ಬೆಂಗಳೂರು: ಸಿಪಿಐ(ಎಂ) ಹಿರಿಯ ನಾಯಕ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಅವರ ನಿಧನಕ್ಕೆ ಮಂಗಳವಾರ ಕಂಬನಿ ಮಿಡಿದಿರುವ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ನ್ಯಾಯದ ಪರ ದೃಢ ಧ್ವನಿಯಾಗಿದ್ದರು ಹಾಗೂ ತಮ್ಮ ಸಿದ್ಧಾಂತಗಳಿಗೆ ಬದ್ಧರಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.   

ತಿರುವನಂತಪುರಂನ ಪಟ್ಟೊಂ ಎಸ್‌ಯುಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿ.ಎಸ್.ಅಚ್ಯುತಾನಂದನ್, ಸೋಮವಾರ ಮಧ್ಯಾಹ್ನ 3.20ಕ್ಕೆ ನಿಧನರಾದರು.

ಭಾರತೀಯ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದ)ದ ಸಂಸ್ಥಾಪಕ ಸದಸ್ಯರ ಪೈಕಿ ಒಬ್ಬರಾದ ಅಚ್ಯುತಾನಂದನ್, ತಮ್ಮ ಜೀವನದುದ್ದಕ್ಕೂ ಕಾರ್ಮಿಕರು, ಭೂಸುಧಾರಣೆ ಹಾಗೂ ಸಾಮಾಜಿಕ ನ್ಯಾಯದ ಪರ ಹೋರಾಟದ ಮುಂಚೂಣಿಯಲ್ಲಿದ್ದರು.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ, "ವಿ.ಎಸ್.ಅಚ್ಯುತಾನಂದನ್ ಅವರು ನ್ಯಾಯದ ಪರ ಗಟ್ಟಿ ಧ್ವನಿಯಾಗಿದ್ದರು ಹಾಗೂ ತಮ್ಮ ಸಾರ್ವಜನಿಕ ಜೀವನದುದ್ದಕ್ಕೂ ಸರಳ ವ್ಯಕ್ತಿಯಾಗಿದ್ದರು. ಹೋರಾಟಗಳಲ್ಲಿ ಸಕ್ರಿಯವಾಗಿದ್ದ ಅವರು, ಕೇರಳದ ಮುಖ್ಯಮಂತ್ರಿ ಅಧಿಕಾರದಲ್ಲಿರುವಾಗ ತಮ್ಮ ಸಿದ್ಧಾಂತಗಳಿಗೆ ಬದ್ಧವಾಗಿದ್ದರು" ಎಂದು ಸ್ಮರಿಸಿದ್ದಾರೆ.

"ಅಚ್ಯುತಾನಂದನ್ ಅವರು ನಿಧನರಾಗಿರುವುದು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಹಾಗೂ ಕೇರಳದ ಜನತೆಗೆ ಹಾಗೂ ಅವರ ಜೀವನದುದ್ದಕ್ಕೂ ಅವರಿಗೆ ಶಕ್ತಿ ತುಂಬಿದ ವ್ಯಕ್ತಿಗಳಿಗೆ ಸಂತಾಪಗಳು. ಅತ್ಯುತ್ತಮ ಜೀವನ ನಡೆಸಿದ ಜೀವಕ್ಕೆ ವಂದನೆಗಳು" ಎಂದು ಅವರು ತಮ್ಮ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News