×
Ad

ಭಾವುಕ ಸಂದೇಶ ಹಂಚಿಕೊಂಡ ನಟ ವಿಜಯ್‌ ರಾಘವೇಂದ್ರ

Update: 2023-08-18 12:37 IST

ವಿಜಯ ರಾಘವೇಂದ್ರ- ಪತ್ನಿ ಸ್ಪಂದನಾ ( ಫೈಲ್‌ ಚಿತ್ರ)

ಬೆಂಗಳೂರು: ಕನ್ನಡ ಚಲನಚಿತ್ರ ನಟ ವಿಜಯ್‌ ರಾಘವೇಂದ್ರ ಅವರು ನಿಧನರಾದ ತಮ್ಮ ಪತ್ನಿ ಸ್ಪಂದನಾ ಬಗ್ಗೆ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. 

ಸ್ನೇಹಿತರ ಜೊತೆಗೆ ಸ್ಪಂದನಾ ವಿದೇಶಿ ಪ್ರವಾಸಕ್ಕೆ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತ ಆಗಿ ಮೃತಪಟ್ಟಿದ್ದರು. ಆ.8ರ ತಡರಾತ್ರಿ ಸ್ಪಂದನಾರ ಮೃತದೇಹ ಥಾಯ್ಲೆಂಡ್‍ನಿಂದ ಬೆಂಗಳೂರಿಗೆ ತರಲಾಗಿತ್ತು. ಇದೀಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ ನಲ್ಲಿ ವಿಜಯ್‌ ರಾಘವೇಂದ್ರ ಅವರು ಸ್ಪಂದನಾ ಅವರ ಭಾವಚಿತ್ರದ ಜೊತೆಗೆ ಭಾವುಕರಾಗಿ ಸಾಲುಗಳನ್ನು ಹೇಳಿಕೊಂಡಿದ್ದಾರೆ.  

ಇನ್ಸ್ಟಾಗ್ರಾಮ್‌ ನಲ್ಲಿ ಅವರ ಪೋಸ್ಟ್‌ ಹೀಗಿದೆ.... 

ಸ್ಪಂದನಾ.. ಹೆಸರಿಗೆ ತಕ್ಕ ಜೀವ.. ಉಸಿರಿಗೆ ತಕ್ಕ ಭಾವ

ಅಳತೆಗೆ ತಕ್ಕ ನುಡಿ.. ಬದುಕಿಗೆ ತಕ್ಕ ನಡೆ

ನಮಗೆಂದೇ ಮಿಡಿದ ನಿನ್ನ ಹೃದಯವ.. ನಿಲ್ಲದು ನಿನ್ನೊಂದಿಗಿನ ಕಲರವ

ನಾನೆಂದೂ ನಿನ್ನವ.. ಕೇವಲ ನಿನ್ನವ.. ಎಂದು ವಿಜಯ್ ರಾಘವೇಂದ್ರ ಅವರು ಭಾವುಕರಾಗಿ ಸಾಲುಗಳನ್ನು ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News