×
Ad

ಬೆಂಗಳೂರು | ಜಿಂಕೆ ಕೊಂಬು, ಆನೆ ದಂತ, ಎರಡು ತಲೆ ಹಾವು ಮಾರಾಟ ಮಾಡುತ್ತಿದ್ದ ​ಐವರು ಆರೋಪಿಗಳ ಬಂಧನ

Update: 2023-11-07 17:54 IST

ಚಿತ್ರ- ಆರೋಪಿಗಳಿಂದ ವಶಕ್ಕೆ ಪಡೆದಿರುವುದು

ಬೆಂಗಳೂರು : ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಜಿಂಕೆ ಕೊಂಬು, ಆನೆ ದಂತ, ಮಾಂಸ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನ ವೈಯಾಲಿ ಕಾವಲ್ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಂದ್ರಶೇಖರ್, ರಂಗಸ್ವಾಮಿ, ಲೋಕೇಶ್, ಶೇಖರ್ ಹಾಗೂ ರೈಮಂಡ್ ಬಂಧಿತ ಆರೋಪಿಗಳು ವೈಯಾಲಿ ಕಾವಲ್ 18ನೇ ಕ್ರಾಸ್ ಹಾಗೂ ಗುಟ್ಟಹಳ್ಳಿ ಸರ್ಕಲ್ ಬಳಿ ದಂಧೆಯಲ್ಲಿ ತೊಡಗಿದ್ದಾಗ, ಖಚಿತ ಸುಳಿವಿನ ಮೇಲೆ ಆರೋಪಿಗಳನ್ನ ಬಂಧಿಸಲಾಗಿದೆ.

ಬಂಧಿತರಿಂದ 10 ಲಕ್ಷ ಮೌಲ್ಯದ ಎರಡು ತಲೆಯ ಎರಡು ಹಾವುಗಳು, 12 ಲಕ್ಷ ಮೌಲ್ಯದ 12 ಜಿಂಕೆ ಕೊಂಬು ಹಾಗೂ 5 ಲಕ್ಷ ಮೌಲ್ಯದ ಆನೆ ದಂತಗಳನ್ನ ವಶಕ್ಕೆ ಪಡೆಯಲಾಗಿದೆ.






 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News