×
Ad

ಧರ್ಮಸ್ಥಳ ಪ್ರಕರಣ | ಎರಡು ಹಿಂದುತ್ವ ಗುಂಪುಗಳ ನಡುವಿನ ಸಂಘರ್ಷ : ಬಿ.ಕೆ.ಹರಿಪ್ರಸಾದ್

Update: 2025-08-23 21:13 IST

ಬೆಂಗಳೂರು, ಆ.23 : ಧರ್ಮಸ್ಥಳ ಪ್ರಕರಣ ಎರಡು ಹಿಂದುತ್ವ ಗುಂಪುಗಳ ನಡುವಿನ ಸಂಘರ್ಷ ಆಗಿದೆ ಎಂದು ವಿಧಾನ ಪರಿಷತ್ತಿನ ಸದಸ್ಯ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

ಶನಿವಾರ ನಗರದಲ್ಲಿ ಖಾಸಗಿ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಅವರು, ಧರ್ಮಸ್ಥಳ ಪ್ರಕರಣ ಸಂಬಂಧ ರಾಜ್ಯ ಸರಕಾರ ಈಗಾಗಲೇ ಎಸ್‍ಐಟಿ ರಚನೆ ಮಾಡಿದ್ದು, ತನಿಖೆ ನಡೆಯುತ್ತಿದೆ. ಆದರೆ, ಈ ಪ್ರಕರಣದ ಹಿಂದೆ ಎರಡು ಹಿಂದುತ್ವ ಗುಂಪುಗಳ ನಡುವಿನ ಸಂಘರ್ಷ ಇದೆ ಎಂದು ಹೇಳಿದ್ದಾರೆ.

ಅದರಲ್ಲೂ, ಬಿಜೆಪಿ ನಾಯಕ ಬಿ.ಎಲ್.ಸಂತೋಷ್ ಹಾಗೂ ಸಂಘಪರಿವಾರದ ಕಲ್ಲಡ್ಕ ಪ್ರಭಾಕರ್ ಮಧ್ಯೆ ನಡೆಯುತ್ತಿರುವ ಸಂಘರ್ಷವಾಗಿದ್ದು, ಅದನ್ನು ಅವರೇ ಸರಿಪಡಿಸಿಕೊಳ್ಳಬೇಕು ಎಂದೂ ಬಿ.ಕೆ.ಹರಿಪ್ರಸಾದ್ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News