×
Ad

ಹಾಸನ ಜಿಲ್ಲಾ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪತ್ತೆ ಪ್ರಕರಣ: ನಾಲ್ವರು ಪೊಲೀಸ್ ಅಧಿಕಾರಿಗಳ ಅಮಾನತು

Update: 2023-08-23 17:45 IST

ಉಪಕಾರಾಗೃಹದ ಪೊಲೀಸ್ ಅಧೀಕ್ಷಕ ಸುರೇಶ್-ಅಮಾನತುಗೊಂಡ ಅಧಿಕಾರಿ

ಹಾಸನ: ಆ,23: ಜಿಲ್ಲಾ ಕಾರಾಗೃಹದ ಮೇಲೆ ಪೊಲೀಸರ ದಾಳಿ ಪ್ರಕರಣ ಕ್ಕೆ ಸಂಬಂದಿಸಿದಂತೆ ನಾಲ್ವರು ಪೊಲೀಸ್ ಅಧಿಕಾರಿಗಳು ಅಮಾನತು ಮಾಡಲಾಗಿದೆ.

ಹಾಸನ ಉಪಕಾರಾಗೃಹದ ಪೊಲೀಸ್ ಅಧೀಕ್ಷಕ ಸುರೇಶ್, ಜೈಲರ್‌ಗಳಾದ ಖುತುಬುದ್ದೀನ್ ದೇಸಾಯಿ, ಜಾದವ್, ಪಾಟೀಲ್ ಅಮಾನತಾದ ಅಧಿಕಾರಿಗಳಾಗಿದ್ದಾರೆ.

ಖೈದಿಯೊಬ್ಬ ಸೆಲ್‌ನೊಳಗಿಂದ ಜೈಲಿನ ವಿಡಿಯೋ ಮಾಡಿ ವೈರಲ್ ಮಾಡಿದ್ದ, ಈ‌ ಹಿನ್ನಲೆಯಲ್ಲಿ ಆ.19 ರಂದು ತಡರಾತ್ರಿ ದಾಳಿ ಮಾಡಿದ್ದ ಪೊಲೀಸರು, 18 ಮೊಬೈಲ್, ಗಾಂಜಾ, ಸಿಗರೇಟ್, ಬಿಡಿ, ಚಾರ್ಜರ್ ವಶಪಡಿಸಿಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಧಿಕಾರಿಗಳು ಕರ್ತವ್ಯ ಲೋಪ ಹಿನ್ನಲೆಯಲ್ಲಿ ನಾಲ್ವರು ಅಧಿಕಾರಿಗಳು ಅಮಾನತು ಮಾಡಿ ಕಾರಾಗೃಹದ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News