×
Ad

ಚಿಕ್ಕಮಗಳೂರು: ಅಡಿಕೆ ತೋಟಕ್ಕೆ ತೆರಳಿದ್ದ ವೃದ್ಧೆ ನಾಪತ್ತೆ

Update: 2023-07-26 09:55 IST

ಚಿಕ್ಕಮಗಳೂರು: ಅಡಿಕೆ ತೋಟ ನೋಡಲು ತೆರಳಿದ್ದ ವೃದ್ಧೆ ನಾಪತ್ತೆಯಾಗಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಸಿದ್ರಳ್ಳಿ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ನಾಪತ್ತೆಯಾದ ಮಹಿಳೆಯನ್ನು ರೇವಮ್ಮ (62) ಎಂದು ಗುರುತಿಸಲಾಗಿದೆ. ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಮೀಪದ ತಾಯಿಹಳ್ಳ ಎಂಬ ಕೆರೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಡಿಕೆ ತೋಟ ಜಲಾವೃತಗೊಂಡಿತ್ತು ಎಂದು ತಿಳಿದು ಬಂದಿದೆ.

ತಾಯಿ ಹಳ್ಳದ ಬಳಿ ವೃದ್ಧೆಯ ಚಪ್ಪಲಿ, ಉರುಗೋಲು ಪತ್ತೆಯಾಗಿದ್ದು, ತಾಯಿ ಹಳ್ಳದಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News