ಚಾಮರಾಜನಗರ : ನಾವು ನಂಬಿಕೆ ಮತ್ತು ಶುದ್ದತೆಯಿಂದ ಇದ್ದು, ಯಾವುದೇ ತಪ್ಪು ಮಾಡದೇ ಇದ್ದಾಗ ಯಾವ ತೊಂದರೆಯೂ ಆಗಲ್ಲ, ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತೆ ಎನ್ನುವುದು ಮೂಢನಂಬಿಕೆ. ಸಿದ್ದರಾಮಯ್ಯ ಅವರು ಎರಡು ಭಾರಿ ಮುಖ್ಯಮಂತ್ರಿಯಾಗಿದ್ದಾಗ ಚಾಮರಾಜನಗರಕ್ಕೆ ಹಲವಾರು ಭಾರಿ ಬಂದಿದ್ದಾರೆ ಅವರು ಅಧಿಕಾರ ಕಳೆದು ಕೊಂಡರೇ ? ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಚಾಮರಾಜನಗರಕ್ಕೆ ರವಿವಾರ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅಂತರಾಷ್ಟ್ರೀಯ ಬೌದ್ದ ಮಹಾ ಸಮ್ಮೇಳನದಲ್ಲಿ ಭಾಗವಹಿಸುವ ಮುನ್ನಾ ಮಾಧ್ಯಮದವರೊಂದಿಗೆ ಮಾತನಾಡಿ, ಚಾಮರಾಜನಗರಕ್ಕೆ ಬಂದಿರುವುದು ಈಗ ಬುದ್ದನ ಪ್ರಾರ್ಥನೆ ಮಾಡಲು, ಬುದ್ದನ ಆಚಾರ, ವಿಚಾರ ಚಿಂತನೆ ಮಾಡಲು, ಬುದ್ದ, ತ್ಯಾಗ, ಅಭಿವೃದ್ದಿ ಚಿಂತನೆ, ಶಾಂತಿಗಳ ಬಗ್ಗೆ ತಿಳಿದುಕೊಂಡು ಜನತೆಗೆ ಮಾಹಿತಿ ನೀಡಲು ಎಂದು ಹೇಳಿದರು.

ಈ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕ ಎ.ಆರ್. ಕೃಷ್ಣಮೂರ್ತಿ ಸೇರಿದಂತೆ ಹಲವಾರು ಮುಖಂಡರುಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor