×
Ad

ಹಾವೇರಿ ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ; ಸ್ಥಳದಲ್ಲಿಯೇ ಮುಖ್ಯ ಇಂಜಿನಿಯರ್ ಅಮಾನತಿಗೆ ಸೂಚನೆ

Update: 2023-07-25 18:35 IST

ಹಾವೇರಿ: ಆಸ್ಪತ್ರೆಯ‌ ಮಕ್ಕಳ ವಾರ್ಡ್, ತಾಯಂದಿರ ವಾರ್ಡ್ ಸೇರಿದಂತೆ ಬಹುತೇಕ ವಾರ್ಡ್ ಗಳು ಮಳೆಯಿಂದ ಸೋರುತ್ತಿದ್ದು, ರೋಗಿಗಳಿಗೆ ತೀವ್ರ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಮಂಗಳವಾರ ದಿಢೀರ್ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಹಿಳೆಯರು ಮತ್ತು ಮಕ್ಕಳನ್ನು ಮಾತನಾಡಿಸಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಮಹಿಳೆಯೊಬ್ಬರು ಮಳೆಯಿಂದ ಸೋರುತ್ತಿರುವ ಬಗ್ಗೆ ದೂರು ನೀಡಿದಾಗ, ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ, ಮುಖ್ಯ ಎಂಜಿನಿಯರ್ ರನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳದಲ್ಲೇ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮೂಲಕ ಮಾತನಾಡಿ, ಈಗಲೇ ಮುಖ್ಯ ಇಂಜಿನಿಯರ್ ನನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು. 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News