×
Ad

ಕಾಂಗ್ರೆಸ್ ಸರಕಾರ ಕರ್ನಾಟಕ ರಾಜ್ಯವನ್ನು ತಾಲಿಬಾನ್ ಮಾಡುತ್ತಿದೆ: ಆರ್. ಅಶೋಕ್

Update: 2025-01-17 19:39 IST

ಆರ್. ಅಶೋಕ್ 

ಬೆಂಗಳೂರು: ‘ಕರ್ನಾಟಕ ರಾಜ್ಯವನ್ನು ತಾಲಿಬಾನ್ ಮಾಡುತ್ತಿದೆ ಕಾಂಗ್ರೆಸ್ ಸರಕಾರ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

ಶುಕ್ರವಾರ ಎಕ್ಸ್‍ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಬೀದರ್ ನಲ್ಲಿ ಹಾಡಹಗಲೇ ಎಟಿಎಂ ವಾಹನವನ್ನು ದರೋಡೆ ಮಾಡಿ, ಸಿಬ್ಬಂದಿಯನ್ನು ಎಲ್ಲರೆದುರೆ ಗುಂಡಿಕ್ಕಿ ಸಾಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೆ, ನಿಮ್ಮ ಅರಾಜಕತೆಯ ದುರಾಡಳಿತದಲ್ಲಿ ಅಪರಾಧಿಗಳಿಗೆ ಕಾನೂನಿನ ಭಯವಿಲ್ಲ, ಪೊಲೀಸರ ಬಗ್ಗೆ ಕ್ಯಾರೆ ಇಲ್ಲ’ ಎಂದು ಲೇವಡಿ ಮಾಡಿದ್ದಾರೆ.

‘ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರೆ, ಈ ಕೊಲೆಗಡುಕರಿಗೆ ಅಮಾಯಕ ಪಟ್ಟ ಕಟ್ಟುತ್ತೀರೋ ಅಥವಾ ಮಾನಸಿಕ ಅಸ್ವಸ್ಥ ಎಂಬ ಪಟ್ಟ ಕಟ್ಟುತ್ತೀರೋ?’ ಎಂದು ಆರ್.ಅಶೋಕ್ ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News