×
Ad

ಚಾಮರಾಜನಗರದಲ್ಲಿ ತೀವ್ರಗೊಂಡ ರೈತರ ಪ್ರತಿಭಟನೆ: ಹೆದ್ದಾರಿ ಬಂದ್‌, ಹಲವರು ಪೊಲೀಸ್‌ ವಶಕ್ಕೆ

Update: 2023-09-21 16:43 IST

ಚಾಮರಾಜನಗರ.ಸೆ.21:- ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಖಂಡಿಸಿ ಕಬ್ಬು ಬೆಳೆಗಾರರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಪ್ರವಾಸಿ ಮಂದಿರದ ಬಳಿ ಜಮಾಯಿಸಿದ ಅಲ್ಲಿಂದ ಸೋಮವಾರಪೇಟೆ ಬಳಿ ತೆರಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿ ತಮಿಳುನಾಡು, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಕಾರರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು.

ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ,  ಸುಪ್ರೀಂಕೋರ್ಟ್ ಆದೇಶ ಖಂಡನೀಯ. ಬಂಗಾರಪ್ಪ ಸೇರಿದಂತೆ ಅನೇಕರು ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿರುವ ನಿದರ್ಶನಗಳಿವೆ. ಈ ಆಧಾರದ ಮೇಲೆ ಕರ್ನಾಟಕ ವಿಶ್ವಸಂಸ್ಥೆ ಆದೇಶ ಮಾಡಿದರೂ ತಮಿಳುನಾಡಿಗೆ ಒಂದು ಲೀಟರ್ ಕೂಡ ಬಿಡಬಾರದು. ಕುಡಿಯುವ ನೀರಿನ ಸಂಬಂಧ ವರದಿ ಮಾಡಿ ಮನವರಿಕೆ ಮಾಡಿಕೊಡಿ ಎಂದರು.

ರಾಜ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರುವ ವೇಳೆ ತಮಿಳುನಾಡಿಗೆ ನೀರು ಬಿಡಲು ಆದೇಶ ಮಾಡುವುದು ಎಷ್ಟು ಸರಿ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಒಂದು ವೇಳೆ ನೀರು ಬಿಟ್ಟರೆ, ತಮಿಳುನಾಡಿನ ಸಿನಿಮಾಗಳನ್ನು, ವಾಹನಗಳು ರಾಜ್ಯಕ್ಕೆ ಪ್ರವೇಶ ಮಾಡುವುದನ್ನು ನಿರ್ಬಂಧಿಸಲಾಗುವುದು. ಸರ್ವಪಕ್ಷ ನೀತಿಯಂತೆ ತಮಿಳುನಾಡಿಗೆ ನೀರು ಬಿಡಬಾರದು. ಇಲ್ಲದಿದ್ದರೆ , ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹಾಲಿನ ನಾಗರಾಜು, ಮಹೇಂದ್ರ, ಪ್ರವೀಣ್, ದೊಡ್ಡಗುರು, ಗುರುಮಲ್ಲಪ್ಪ, ಹರಿಸುವ೦ತೆ ನೀಡಿರುವ ರಾಜು, ಸಿದ್ದರಾಜು, ಬಸವರಾಜಪ್ಪ, ನಂದೀಶ್, ರವಿ ಸೇರಿದಂತೆ ಇತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News