ಹಳೆಯ ಮತಪಟ್ಟಿಯಲ್ಲೇ ಜಿಬಿಎ ಚುನಾವಣೆ : ಐದು ನಗರ ಪಾಲಿಕೆಗಳ ಚುನಾವಣೆಗೆ ಅನುಮತಿ ಕೋರಿ ಸುಪ್ರೀಂಗೆ ರಾಜ್ಯ ಚುನಾವಣಾ ಆಯೋಗ ಅರ್ಜಿ
Photo Credit : ddindia.co.in
ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಹಳೆಯ ಮತದಾರರ ಪಟ್ಟಿಯನ್ನೇ ಬಳಸಲು ಅನುಮತಿ ನೀಡುವಂತೆ ರಾಜ್ಯ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಎಸ್ಐಆರ್ ನಂತರದ ಮತದಾರರ ಸಂಪೂರ್ಣ ದತ್ತಾಂಶ ವಿಳಂಬವಾಗಿರುವ ಹಿನ್ನೆಲೆಯಲ್ಲಿ, 2026ರ ಎ.18ರಂದು ಪ್ರಕಟವಾದ ಅಂತಿಮ ಮತದಾರರ ಪಟ್ಟಿಯ ಆಧಾರದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಆಯೋಗ ಮನವಿ ಮಾಡಿದೆ.
ಜೊತೆಗೆ, ಹಿಂದಿನ ವಾರ್ಡ್ವಾರು ಮತದಾರರ ಪಟ್ಟಿಗಳ ಆಧಾರದಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು 2027ರ ಜನವರಿ 31ರವರೆಗೆ ಕಾಲಾವಕಾಶ ವಿಸ್ತರಿಸುವಂತೆಯೂ ರಾಜ್ಯ ಚುನಾವಣಾ ಆಯೋಗ ಅರ್ಜಿಯಲ್ಲಿ ತಿಳಿಸಿದೆ.
ಎಸ್ಐಆರ್ ಬಳಿಕ ಅ.27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದರೂ, ವಾರ್ಡ್ವಾರು ವಿಭಾಗ, ಮ್ಯಾಪಿಂಗ್, ಪರಿಶೀಲನೆ ಮತ್ತು ಮತದಾರರ ಪಟ್ಟಿಯ ಪ್ರಕಟನೆಗೆ ಸಂಪೂರ್ಣ ಬಳಕೆಗೆ ಯೋಗ್ಯವಾದ ದತ್ತಾಂಶ ಅಗತ್ಯ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಅಲ್ಲದೆ, ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ 2025ರ ಅ.1ರ ಮತದಾರರ ಪಟ್ಟಿಗಳ ಆಧಾರದಲ್ಲಿ ಚುನಾವಣೆ ನಡೆಸಲು ಅನುಮತಿ ನೀಡುವಂತೆಯೂ ನ್ಯಾಯಾಲಯಕ್ಕೆ ಆಯೋಗವು ಕೋರಿದೆ.