×
Ad

ಭಾರತ್‌ ಜೋಡೋ ವೇಳೆ ರಾಹುಲ್‌ ಗಾಂಧಿಗೆ ಸೌತೆಕಾಯಿ ಉಡುಗೊರೆ ನೀಡಿದ್ದ ಅಜ್ಜಿ ನಿಧನ

Update: 2023-11-21 14:32 IST

Photo: twitter.com//@SevadalHYD

ಬೆಂಗಳೂರು :ಭಾರತ್‌ ಜೋಡೋ ಯಾತ್ರೆ ವೇಳೆ ರಾಹುಲ್‌ ಗಾಂಧಿ ಅವರಿಗೆ ಸೌತೆಕಾಯಿ ನೀಡಿ ʼಇದು ನಿಮ್ಮ ಅಜ್ಜಿ ನೀಡಿದ ಜಮೀನಿನಲ್ಲಿ ಬೆಳೆದಿದ್ದುʼ ಎಂದು ಹೇಳಿ ಇಡೀ ದೇಶದ ಗಮನ ಸೆಳೆದಿದ್ದ ಚಿಕ್ಕನಾಯಕನಹಳ್ಳಿಯ ಶಾರದಮ್ಮಎಂಬ ಮಹಿಳೆಯ ನಿಧನಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ X ನಲ್ಲಿ ಸಂತಾಪ ಸೂಚಿಸಿದ್ದಾರೆ.

ಈ ಬಗ್ಗೆ X ನಲ್ಲಿ ಬರೆದುಕೊಂಡಿರುವ " ಡಿಕೆ ಶಿವಕುಮಾರ್‌ ಭಾರತ್ ಜೋಡೋ ಯಾತ್ರೆ ವೇಳೆ ನಮ್ಮ ನಾಯಕರಾದ ಶ್ರೀ ರಾಹುಲ್‌ ಗಾಂಧಿ ಅವರಿಗೆ ಸೌತೆಕಾಯಿ ನೀಡಿ ʼಇದು ನಿಮ್ಮ ಅಜ್ಜಿ ನೀಡಿದ ಜಮೀನಿನಲ್ಲಿ ಬೆಳೆದಿದ್ದುʼ ಎಂದು ಹೇಳಿ ಇಡೀ ದೇಶದ ಗಮನ ಸೆಳೆದಿದ್ದ ಚಿಕ್ಕನಾಯಕನಹಳ್ಳಿಯ ಶ್ರೀಮತಿ ಶಾರದಮ್ಮ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ಅಪಾರ ನೋವುಂಟಾಯಿತು. ಮೊನ್ನೆಯಷ್ಟೇ ನಡೆದ ಶ್ರೀಮತಿ ಇಂದಿರಾ ಗಾಂಧಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಶಾರದಮ್ಮ ಅವರನ್ನು ನೆನಪಿಸಿಕೊಂಡಿದ್ದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ವರ್ಗದವರ ನೋವಿನಲ್ಲಿ ನಾನೂ ಕೂಡ ಭಾಗಿ "ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News