×
Ad

ಹಾಸನ: ದಾಳಿ ಮಾಡಿದ ಚಿರತೆಯನ್ನೇ ಬೈಕಿನಲ್ಲಿ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕ!

Update: 2023-07-14 18:26 IST

ಹಾಸನ: ಯುವಕನೊಬ್ಬ ದಾಳಿ ಮಾಡಿದ ಚಿರತೆಯನ್ನೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆಯೊಂದು ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿ ಬಾಗಿವಾಳು ಗ್ರಾಮದಲ್ಲಿ ಶುಕ್ರವಾರ ವರದಿಯಾಗಿದೆ. 

ವೇಣುಗೋಪಾಲ್ ಅಲಿಯಾಸ್ ಮುತ್ತು ದಾಳಿ ಮಾಡಿದ ಚಿರತೆಯನ್ನು ಜೀವಂತವಾಗಿ ಸೆರೆಹಿಡಿದ ಯವಕ ಎಂದು ಹೇಳಲಾಗಿದೆ. 

ಜಮೀನಿಗೆ ಹೋಗುತ್ತಿದ್ದ ವೇಳೆ ವೇಣುಗೋಪಾಲ್ ಮೇಲೆ ಚಿರತೆ ದಾಳಿ ಮಾಡಿದ್ದು, ತನ್ನ ಜೀವ ಉಳಿಸಿಕೊಳ್ಳುವ ಉದ್ದೇಶದಿಂದ ಧೈರ್ಯ ಮಾಡಿದ ಯುವಕ ಚಿರತೆಗೆ ಬಡಿಗೆಯಲ್ಲಿ ಹೊಡೆದು ಸೆರೆ ಹಿಡಿದು ತನ್ನ ಬೈಕ್‍ನಲ್ಲಿ ಕಟ್ಟಿಕೊಂಡು ತನ್ನ ಗ್ರಾಮಕ್ಕೆ ಹೋಗಿದ್ದಾನೆನ್ನಲಾಗಿದೆ.

ಬಳಿಕ ಗ್ರಾಮಸ್ಥರೆಲ್ಲರೂ ಸೇರಿ ಗಾಯಗೊಂಡಿದ್ದ ಮುತ್ತುಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ನಂತರ ಚಿರತೆಯನ್ನು ಬೈಕಿನಲ್ಲಿ ಕಟ್ಟಿಕೊಂಡು ಹೋಗಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ ಎಂದು ತಿಳಿದು ಬಂದಿದೆ. 

ರಾಜ್ಯದಲ್ಲಿ ಇತ್ತೀಚಿನ ದಿನಗಳಳಲ್ಲಿ ಕಾಡು ಪ್ರಾಣಿಗಳು ಆಹಾರವನ್ನರಸಿ ನಾಡಿಗೆ ಬರುವ ಸಂಖ್ಯೆಗಳು ಹೆಚ್ಚಾಗುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News