ಚಿತ್ರದುರ್ಗ ಬಸ್ ದುರಂತ ಪ್ರಕರಣ : ಚಿಕಿತ್ಸೆ ಫಲಕಾರಿಯಾಗದೆ ಚಾಲಕ ಮೃತ್ಯು
Update: 2025-12-26 10:40 IST
ಹುಬ್ಬಳ್ಳಿ: ಚಿತ್ರದುರ್ಗದ ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಸಮೀಪದ ಆನೆಸಿದ್ರಿ ಕ್ರಾಸ್ ಬಳಿ ಬುಧವಾರ ತಡರಾತ್ರಿ ನಡೆದ ಬಸ್ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.
ಸೀ ಬರ್ಡ್ ಬಸ್ ಚಾಲಕ ಮಹಮದ್ ರಫೀಕ್ ಮೃತ ವ್ಯಕ್ತಿ. ಬಸ್ ದುರಂತದಲ್ಲಿ ಮಹಮದ್ ರಫೀಕ್ ತೀವ್ರವಾಗಿ ಗಾಯಗೊಂಡಿದ್ದರು. ಘಟನೆಯಲ್ಲಿ ಎರಡು ಕಾಲು, ಒಂದು ಕೈ ಮುರಿತಕ್ಕೊಳಗಾಗಿತ್ತು. ಇವರನ್ನು ಹುಬ್ಬಳಿ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಗುರುವಾರ ರಾತ್ರಿ ಆಪರೇಷನ್ ವೇಳೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.