×
Ad

ಸಿದ್ದರಾಮಯ್ಯ ಅಹಿಂದ ನಾಯಕ ಆಗಿದ್ದರೆ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದಿತ್ತು : ಎಚ್.ಡಿ.ದೇವೇಗೌಡ

Update: 2025-12-26 22:24 IST

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದ ನಾಯಕ ಆಗಿದ್ದರೆ, ಎಲ್ಲಿ ಬೇಕಾದರೂ ಸ್ಪರ್ಧಿಸಬಹುದಿತ್ತು. ಆದರೆ, ನಿಮ್ಮ ಮಗ ಬಿಟ್ಟ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕಾಯಿತು ಎಂದು ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ನಗರದ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಜ.25ಕ್ಕೆ ಅಹಿಂದ ಸಮಾವೇಶ ನಡೆಸುವ ವಿಚಾರ ಗೊತ್ತಾಗಿದೆ. ಆದರೆ, ನೀವು(ಸಿದ್ದರಾಮಯ್ಯ) ಅಹಿಂದ ನಾಯಕ ಎಂದಾದರೆ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದಿತ್ತು. ಏಕೆ ನೀವು ನಿಮ್ಮ ಮಗನನ್ನು ಖಾಲಿ ಮಾಡಿಸಲಾಯಿತು ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರನ್ನು ಗುರುತಿಸಿದ್ದು ನಾನು ಎಂದು ಹೇಳಲ್ಲ, ಅವರೇ ಹೇಳಲಿ. ನನ್ನ ಬಗ್ಗೆ ಕಠಿಣವಾಗಿ ಏನು ಬೇಕಾದರೂ ಅವರು ಮಾತಾಡಲಿ. ಅವರ ಮಗ ಸಾವನ್ನಪ್ಪಿದಾಗ ಅವರ ಮನೆಗೆ ಹೋಗಿದ್ದೆ. ಎರಡನೆ ಮಗನ ರಾಜಕೀಯಕ್ಕೆ ಬರಬೇಕೆಂದು ಹೇಳಿದ್ದೆ. ಅವರು ಬಾದಾಮಿಯಲ್ಲಿ ನಿಂತರು. ಕೋಲಾರ, ಮೈಸೂರು, ಬಾದಾಮಿಯಿಂದಲೂ ಸ್ಪರ್ಧೆ ಮಾಡಲಾಗುತ್ತದೆ ಎಂದು ಚರ್ಚೆ ಆಯಿತು. ನೀವು ಅಹಿಂದ ನಾಯಕರು. ಆದರೂ ಒಂದು ಕ್ಷೇತ್ರಕ್ಕೆ ಹುಡುಕಾಟ ನಡೆಸಲಾಯಿತು ಎಂದು ಅವರು ಉಲ್ಲೇಖಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News