×
Ad

ನನಗೆ ಮಂತ್ರಿಗಿರಿ ಆಸೆಯಿಲ್ಲ: ಕಾಂಗ್ರೆಸ್ ಶಾಸಕ ರಾಜು ಕಾಗೆ

Update: 2025-07-01 20:38 IST

ಶಾಸಕ ರಾಜು ಕಾಗೆ

ಬೆಂಗಳೂರು: ನನಗೆ ಮಂತ್ರಿಗಿರಿಯಾಗಲೀ ಅಥವಾ ಬೇರೆ ಇನ್ನಾವುದೇ ಆಸೆಗಳಿಲ್ಲ. ಹಾಗಾಗಿ ಹೆದರಿಕೆಯಿಲ್ಲದೆ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ ಎಂದು ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮಧ್ಯಾಹ್ನ 2 ಗಂಟೆಗೆ ನನಗೆ ಸುರ್ಜೇವಾಲ ಭೇಟಿಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಪೂರ್ವನಿಗದಿತ ಕಾರ್ಯಕ್ರಮ ಇದ್ದಿದ್ದರಿಂದಾಗಿ ಸಭೆಗೆ ಹಾಜರಾಗಲಿಲ್ಲ. ಇಂದು ಭೇಟಿ ಮಾಡಿದ್ದೇನೆ ಎಂದರು.

ಶಾಸಕ ಬಿ.ಆರ್.ಪಾಟೀಲ್ ಹೇಳಿರುವುದು ಅಕ್ಷರಶಃ ನಿಜವಿದೆ. ನಮಲ್ಲೂ ಅನೇಕ ನೋವುಗಳಿವೆ. ಕೆಲ ಸಚಿವರ ನಡವಳಿಕೆಗಳು ಸರಿಯಿಲ್ಲ. ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೀಡುವ ಪತ್ರಗಳನ್ನು ಗಮನಿಸುವುದೇ ಇಲ್ಲ. ತಮ್ಮ ಪಾಡಿಗೆ ತಾವು ಯಾರೊಂದಿಗೋ ಮಾತನಾಡಿಕೊಂಡು ಹೋಗುತ್ತಾರೆ.

ಶಾಸಕರು ಸಾರ್ವಜನಿಕವಾಗಿ ಸಚಿವರ ಬಳಿ ಹೋಗಿ ಸಮಸ್ಯೆಗಳನ್ನು ಹೇಳಿಕೊಳ್ಳಲಾಗುವುದಿಲ್ಲ. ಇದಕ್ಕಾಗಿ ಶಾಸಕರಿಗಾಗಿಯೇ ಪ್ರತ್ಯೇಕ ಸಮಯ ನೀಡುವ ಅಗತ್ಯವಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News