×
Ad

ಡಿಕೆಶಿ ಸಂಪುಟದಲ್ಲಿ ಉತ್ತರ ಕರ್ನಾಟಕದ ಪ್ರಭಾವಿ ನಾಯಕ ಎಂ.ಬಿ.ಪಾಟೀಲ್‌ಗೆ ಮತ್ತೆ ಸಚಿವ ಸ್ಥಾನ

Update: 2026-06-03 18:21 IST

ಎಂ.ಬಿ.ಪಾಟೀಲ್‌

ವಿಜಯಪುರ : ರಾಜ್ಯ ರಾಜಕಾರಣದ ಪ್ರಮುಖ ಸ್ಥಿತ್ಯಂತರದಲ್ಲಿ, ಸಿದ್ದರಾಮಯ್ಯ ಅವರ ರಾಜೀನಾಮೆಯಿಂದ ತೆರವಾದ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ.ಶಿವಕುಮಾರ್ ಅಧಿಕೃತವಾಗಿ ಅಲಂಕರಿಸಿದ್ದಾರೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಶಿವಕುಮಾರ್ ಅವರ ಹೊಸ ಸಂಪುಟಕ್ಕೆ ಹಿರಿಯ ನಾಯಕ ಎಂ.ಬಿ. ಪಾಟೀಲ್ ಅವರು ಸೇರ್ಪಡೆಯಾಗಿದ್ದಾರೆ.

ಎಂ.ಬಿ. ಪಾಟೀಲ್ ಅವರು ಉತ್ತರ ಕರ್ನಾಟಕದ ಅತ್ಯಂತ ಪ್ರಭಾವಿ ನಾಯಕರಲ್ಲಿ ಒಬ್ಬರು. ರಾಜಕೀಯ ಮುತ್ಸದ್ದಿತನ, ಆಡಳಿತಾತ್ಮಕ ಚಾಕಚಕ್ಯತೆ ಹಾಗೂ ಅಭಿವೃದ್ಧಿ ಪರ ಚಿಂತನೆಗಳ ಮೂಲಕ ಅವರು ರಾಜ್ಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದಾರೆ.

ಎಂ.ಬಿ. ಪಾಟೀಲ್ ಅವರು ಶಿಕ್ಷಣ ತಜ್ಞ ಹಾಗೂ ರಾಜಕಾರಣಿಯಾಗಿದ್ದ ದಿ. ಬಿ.ಎಂ.ಪಾಟೀಲ್ ಅವರ ಹಿರಿಯ ಪುತ್ರ. ವಿಜಯಪುರದ BLDEA ಇಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ (B.E.) ಪದವಿ ಪಡೆದಿದ್ದಾರೆ. ಎಂ. ಬಿ.ಪಾಟೀಲ್ ಅವರು 1991 ರಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ.

ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವರಾಗಿದ್ದ ದಿವಂಗತ ಬಿ.ಎಂ.ಪಾಟೀಲ್ ಅವರ ಪುತ್ರರಾದ ಎಂ.ಬಿ.ಪಾಟೀಲ್(ಮಲ್ಲನಗೌಡ ಬಸನಗೌಡ ಪಾಟೀಲ್) ಅವರು ತಂದೆಯ ನಿಧನದ ನಂತರ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಸಿವಿಲ್ ಎಂಜಿನಿಯರಿಂಗ್ ಪದವೀಧರರಾದ ಇವರು, ವಿಜಯಪುರ ಜಿಲ್ಲೆಯ ಬಬಲೇಶ್ವರ (ಹಳೆಯ ತಿಕೋಟಾ) ಕ್ಷೇತ್ರದಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. 1998 ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಅವರು 2013-2018ರ ಸಿದ್ದರಾಮಯ್ಯನವರ ಮೊದಲ ಅವಧಿಯ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. 

ಎಂ.ಬಿ.ಪಾಟೀಲ್ ಅವರು ಒಟ್ಟು 5 ಬಾರಿ ಶಾಸಕರಾಗಿ (MLA) ಮತ್ತು 3 ಬಾರಿ ವಿವಿಧ ಇಲಾಖೆಗಳ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಜಯಪುರ ಜಿಲ್ಲೆಯ ತಿಕೋಟಾ ಮತ್ತು ಬಬಲೇಶ್ವರ ಕ್ಷೇತ್ರಗಳಿಂದ ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

1ನೇ ಬಾರಿ (1991 - 1994): ತಿಕೋಟಾ ಕ್ಷೇತ್ರ (ಉಪಚುನಾವಣೆ ಮೂಲಕ ರಾಜಕೀಯ ಪ್ರವೇಶ)

2ನೇ ಬಾರಿ (2004 - 2008): ತಿಕೋಟಾ ಕ್ಷೇತ್ರ

3ನೇ ಬಾರಿ (2008 - 2013): ಬಬಲೇಶ್ವರ ಕ್ಷೇತ್ರ (ಕ್ಷೇತ್ರ ಮರುವಿಂಗಡಣೆಯ ನಂತರ)

4ನೇ ಬಾರಿ (2013 - 2018): ಬಬಲೇಶ್ವರ ಕ್ಷೇತ್ರ

5ನೇ ಬಾರಿ (2018 - 2023): ಬಬಲೇಶ್ವರ ಕ್ಷೇತ್ರ

(2023 ರ ವಿಧಾನಸಭಾ ಚುನಾವಣೆಯಲ್ಲೂ ಬಬಲೇಶ್ವರ ಕ್ಷೇತ್ರದಿಂದ ಸತತವಾಗಿ ಗೆದ್ದು ಪ್ರಸ್ತುತ ಶಾಸಕರಾಗಿದ್ದಾರೆ)

ರಾಜ್ಯ ಸರ್ಕಾರದ ಮೂರು ಅವಧಿಗಳಲ್ಲಿ ಅವರು ಪ್ರಭಾವಿ ಖಾತೆಗಳ ಕ್ಯಾಬಿನೆಟ್ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.

1. 2013 – 2018 ಸಿದ್ದರಾಮಯ್ಯ (ಮೊದಲ ಅವಧಿ) ಜಲಸಂಪನ್ಮೂಲ ಸಚಿವರು

2. 2018 – 2019 ಎಚ್.ಡಿ.ಕುಮಾರಸ್ವಾಮಿ (ಸಮ್ಮಿಶ್ರ ಸರ್ಕಾರ) ಗೃಹ ಸಚಿವರು

3. 2023 – ಪ್ರಸ್ತುತ ಸಿದ್ದರಾಮಯ್ಯ ಅವರ ಎರಡನೇ ಅವಧಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News