×
Ad

ಕ್ರಿಕೆಟ್ ಪಂದ್ಯದ ವಿಚಾರದಲ್ಲೂ ರಾಜಕೀಯ ಮಾಡುವ ಅಗತ್ಯವಿತ್ತೇ?: ಎಚ್​ಡಿಕೆಗೆ ದಿನೇಶ್ ಗುಂಡೂರಾವ್ ಪ್ರಶ್ನೆ

Update: 2023-10-22 18:44 IST

ಬೆಂಗಳೂರು, ಅ. 22: ‘ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್‌ ವೀಕ್ಷಿಸಿದ ಮುಖ್ಯಮಂತ್ರಿಗಳನ್ನು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ. ಪಂದ್ಯ (ಮ್ಯಾಚ್) ನೋಡಲು ಹೋದ ಸಿದ್ದರಾಮಯ್ಯರನ್ನು ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಲು ಹೋಗಿದ್ದಾರೆ ಎಂದಿದ್ದಾರೆ. ಇದೆಂಥಾ ಸಂಕುಚಿತ ಮನಸ್ಥಿತಿ?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ರವಿವಾರ X ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ಕುಮಾರಸ್ವಾಮಿ ಅವರು ಕ್ರಿಕೆಟ್ ಪಂದ್ಯದ ವೀಕ್ಷಣೆಯಲ್ಲೂ ರಾಜಕೀಯ ಮಾಡುವ ಅಗತ್ಯವಿತ್ತೆ?, ಏನಾಗಿದೆ ಎಚ್.ಡಿ.ಕುಮಾರಸ್ವಾಮಿ ಅವರಿಗೆ? ಎಂದು ಖಾರವಾಗಿ ಕೇಳಿದ್ದಾರೆ.

‘ವಿಶ್ವಕಪ್‍ನಂತಹ ಪ್ರಮುಖ ಟೂರ್ನಿಯೊಂದರ ಪಂದ್ಯ ಬೆಂಗಳೂರಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ನಡೆದ ಆಸ್ಟ್ರೇಲಿಯಾ ವರ್ಸಸ್ಸ್ ಪಾಕಿಸ್ತಾನದ ಪಂದ್ಯವನ್ನು ಸಾವಿರಾರು ಜನ ಟಿಕೆಟ್ ಖರೀದಿಸಿ ವೀಕ್ಷಿಸಿದ್ದಾರೆ. ಹಾಗಾದರೆ ಎಚ್‍ಡಿಕೆಯವರ ಪ್ರಕಾರ ಅವರೆಲ್ಲರೂ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಲು ಹೋಗಿದ್ದರೆ?, ಬಿಜೆಪಿ ಸಖ್ಯ ಬೆಳೆಸಿದ ಕೂಡಲೇ ಕುಮಾರಸ್ವಾಮಿಯವರ ಮನಸ್ಸು ಇಷ್ಟು ಕಲುಷಿತವಾಯಿತೆ?’ ಎಂದು ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News