ʼಲ್ಯಾಪ್‍ಟಾಪ್ ಕೊಡಿʼ ಎಂದು ಮನವಿ ಮಾಡಿದ ಪ್ರಭು ಚೌಹಾಣ್; ನೀವೇ ಬಳಸುವುದಾದರೆ ಐಪ್ಯಾಡ್ ನೀಡುವ ಚಿಂತನೆ ಇದೆ ಎಂದ ಸ್ಪೀಕರ್ ಯು.ಟಿ.ಖಾದರ್
Update: 2026-02-02 20:52 IST
ಸ್ಪೀಕರ್ ಯು.ಟಿ.ಖಾದರ್/ಪ್ರಭು ಚೌಹಾಣ್
ಬೆಂಗಳೂರು : ವಿಧಾನಸಭೆಯ ಪ್ರತಿ ಸದಸ್ಯರಿಗೆ(ಶಾಸಕರಿಗೆ) ಐಪ್ಯಾಡ್ ನೀಡುವ ಚಿಂತನೆ ಇದೆ. ಆದರೆ, ಅದನ್ನು ಶಾಸಕರು ಮಾತ್ರ ಬಳಕೆ ಮಾಡಬೇಕೆಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಸೋಮವಾರ ವಿಧಾನಸಭೆಯ ಕಲಾಪದ ಆರಂಭದಲ್ಲಿ ಬಿಜೆಪಿ ಸದಸ್ಯ ಪ್ರಭು ಚೌಹಾಣ್ ವಿಷಯ ಪ್ರಸ್ತಾಪಿಸಿ, ಎಲ್ಲ ಸದಸ್ಯರಿಗೆ ಲ್ಯಾಪ್‍ಟಾಪ್ ಕೊಡಿ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಖಾದರ್, ತಮಗೆ ಲ್ಯಾಪ್‍ಟಾಪ್ ಅಲ್ಲ, ಐ ಪ್ಯಾಡ್ ನೀಡುವ ಆಲೋಚನೆ ಇದೆ. ಆದರೆ, ಅದನ್ನು ಶಾಸಕರು ತಾವು ಬಳಸದೆ ಸ್ನೇಹಿತರಿಗೆ, ಕುಟಂಬಸ್ಥರಿಗೆ, ಆಪ್ತ ಸಹಾಯಕರಿಗೆ ನೀಡುವುದಾದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಖುದ್ದಾಗಿ ಶಾಸಕರೇ ಬಳಸುವುದಾದರೆ ನೀಡಲಾಗುವುದು ಎಂದು ತಿಳಿಸಿದರು.
ಐಪ್ಯಾಡ್ ಬಳಕೆ ಮಾಡಲು ಶಾಸಕರಿಗೆ ಮೂರು ದಿನಗಳ ತರಬೇತಿ ನೀಡಲಾಗುವುದು. ಅದರಲ್ಲಿ ಭಾಗವಹಿಸಿದವರಿಗೆ ಮಾತ್ರ ಐಪ್ಯಾಡ್ ನೀಡಲಾಗುವುದು ಎಂದು ಸಭಾಧ್ಯಕ್ಷರು ಹೇಳಿದರು.