ಸತ್ತಂತಿರುವ ಪ್ರಜಾಪ್ರಭು ಎದ್ದು ಪ್ರಶ್ನಿಸುವವರೆಗೆ ಅಸ್ವಸ್ಥ ಸಮಾಜದಲ್ಲಿ ಎಲ್ಲವೂ ಸಹಜ : ಕಿಶೋರ್ ಕುಮಾರ್
Update: 2025-07-19 23:44 IST
ನಟ ಕಿಶೋರ್ ಕುಮಾರ್
ಬೆಂಗಳೂರು : "ಅಸ್ವಸ್ಥ ಸಮಾಜದಲ್ಲಿ ಎಲ್ಲವೂ ಸಹಜವೇ" ಎಂದು ಧರ್ಮಸ್ಥಳ ಸರಣಿ ಹತ್ಯೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ನಟ ಕಿಶೋರ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಫೇಸ್‌ಬುಕ್‌ನಲ್ಲಿ ʼಧರ್ಮಸ್ಥಳ ದೂರು; ಅಸ್ಥಿ ಪಂಜರ ಸಿಕ್ಕಿದ ಸ್ಥಳದ ಮಹಜರು ಮಾಡುತ್ತಿಲ್ಲ ಯಾಕೆ? ಎಂದು ಕೇಳಿದ ದೂರುದಾರನ ವಕೀಲರುʼ ಎಂಬ ʼವಾರ್ತಾಭಾರತಿʼಯ ವರದಿ ಪೋಸ್ಟರ್ ಹಂಚಿಕೊಂಡಿರುವ ಅವರು, "ಅಸ್ವಸ್ಥ ಸಮಾಜದಲ್ಲಿ ಎಲ್ಲವೂ ಸಹಜವೇ..... ಕೊಲೆಗಳು, ಅತ್ಯಾಚಾರಗಳು.. ದನಿಯೆತ್ತಿದವರು, ಅಮಾಯಕರು ಜೈಲುಪಾಲಾಗುವುದು… ಅತ್ಯಾಚಾರಿಗಳು, ಕೊಲೆಗಡುಕರು, ಆತಂಕವಾದಿಗಳು ಭ್ರಷ್ಟರು ಅಧಿಕಾರದ ಗದ್ದುಗೆಯೇರಿ ಮೆರೆಯುವುದು…ಎಲ್ಲವೂ… ಸತ್ತಂತಿರುವ ಪ್ರಜಾಪ್ರಭು ಎದ್ದು ಪ್ರಶ್ನಿಸುವವರೆಗೆ" ಎಂದು ಬರೆದುಕೊಂಡಿದ್ದಾರೆ.