×
Ad

ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಕಾಲಿಗೆ ಬಿದ್ದ ಕುಮಾರಸ್ವಾಮಿ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

Update: 2023-09-25 20:24 IST

ಕಲಬುರಗಿ: ತಮ್ಮಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ಕಾಲಿಗೆ ಬಿದ್ದು ಬಂದಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.

ಚಿಂಚೋಳಿಯಲ್ಲಿ ಸೋಮವಾರ ಮಾಧ್ಯಮಗಲಳಿಗೆ ಪ್ರತಿಕ್ರಿಯೆ ನೀಡಿದ ಅವರು, ʻʻರಾಜಕೀಯವಾಗಿ ಅವರಿಗೆ ಹೇಳೊದಕ್ಕೆ ಬೇರೆ ಏನು ಇಲ್ಲ. ರಾಜ್ಯದ ಹಿತದೃಷ್ಟಿ ಬಿಟ್ಟು ಪಕ್ಷ ಹಾಗೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿದ್ದಾರೆʻʻ ಎಂದು ಕಿಡಿಕಾರಿದರು.

ʻʻದೆಹಲಿಗೆ ಹೋದಾಗ ಪ್ರಧಾನಿ ಅವರನ್ನು ಭೇಟಿ ಮಾಡಿದ್ದರಲ್ಲ, ಆಗ ಏನು ಚರ್ಚೆ ಮಾಡಿದ್ರು? ಬರಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾತನಾಡಿದ್ದಾರೆ. ಆಗ ಕಾವೇರಿ ನೆನಪು ಅಗಲಿಲ್ವಾ? ಗೃಹಸಚಿರ ಬಳಿ ಹೋದ್ರು, ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿದ್ರು, ಆಗ ರಾಜ್ಯದ ವಿಷಯಗಳು ಚರ್ಚೆಗೆ ಬರಲೇ ಇಲ್ಲ. ಬರೀ ಪಕ್ಷದ ಬಗ್ಗೆ ಚರ್ಚೆಯಾಯ್ತಾ. ಇದೀಗ ಡಬಲ್‌ ಇಂಜಿನ್ ಅಲ್ಲ, ತ್ರಿಬಲ್ ಇಂಜಿನ್ ಆಗಿದೆʻʻ ಎಂದು ತಿರುಗೇಟು ನೀಡಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News