×
Ad

ವಿಧಾನ ಪರಿಷತ್ ಚುನಾವಣೆ | ಶೇ.100ರಷ್ಟು ಮತದಾನ

ಪರಿಷತ್ ಚುನಾವಣೆ ಫಲಿತಾಂಶ ದತ್ತ ಎಲ್ಲರ ಚಿತ್ತ : ಏಳನೇ ಅಭ್ಯರ್ಥಿ ಗೆಲುವಿನ ಕುತೂಹಲ

Update: 2026-06-18 15:24 IST

ಬೆಂಗಳೂರು : ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಮಧ್ಯಾಹ್ನ 2.20ರ ವೇಳೆಗೆ ಶೇ.100ರಷ್ಟು ಮತದಾನವಾಗಿದೆ. 222 ಮತಗಳು ಚಲಾವಣೆಯಾಗಿದ್ದು, ಸಂಜೆ 4 ಗಂಟೆವರೆಗೆ ಚುನಾವಣೆ ಪ್ರಕ್ರಿಯೆ ನಡೆಯಲಿದೆ.

ಕಾಂಗ್ರೆಸ್ 5 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಬಿಜೆಪಿ 2 ಹಾಗೂ ಜೆಡಿಎಸ್ 1 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆ ರಾಜಕೀಯವಾಗಿ ಸಾಕಷ್ಟು ಕುತೂಹಲ ಮೂಡಿಸಿದ್ದು, ಅಡ್ಡಮತದಾನ ಮತ್ತು ಪಕ್ಷಾಂತರ ಚರ್ಚೆಗಳ ನಡುವೆ ಮತದಾನ ಪ್ರಕ್ರಿಯೆ ಮಹತ್ವ ಪಡೆದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News