×
Ad

RSS ವಿಷಯ ದಲಿತ ಮನುಷ್ಯನಿಗೆ ಏಕೆ ಬೇಕು? : ವಿಜಯಪುರ ಸಂಸದ ರಮೇಶ್ ಜಿಗಜಿಣಗಿ

"ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನಲ್ಲಿ ದುಡಿದಿದ್ದಾರೆ ಎಂದು ಪ್ರಿಯಾಂಕ್‌ಗೆ ಸಚಿವ ಸ್ಥಾನ ನೀಡಿದ್ದಾರೆ"

Update: 2026-06-17 23:14 IST

ವಿಜಯಪುರ: ‘RSS ತಂಟೆಗೆ ಬಂದವರು ಇದುವರೆಗೆ ಯಾರೂ ಉಳಿದಿಲ್ಲ, RSS ವಿಷಯ ದಲಿತ ಮನುಷ್ಯನಿಗೆ ಏಕೆ ಬೇಕು? ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದರು.

ವಿಜಯಪುರದಲ್ಲಿ ಬುಧವಾರ ಸುದ್ದಿಗಾರರೊಂದಿ ಮಾತನಾಡಿದ ಅವರು, ‘RSS ಬಗ್ಗೆ ಪ್ರಿಯಾಂಕ್ ಖರ್ಗೆ ನೀಡುತ್ತಿರುವ ಹೇಳಿಕೆ ಬಹಳ ಕೆಟ್ಟ ಎನಿಸುತ್ತದೆ, RSS ನೋಂದಾಯಿಸಿ ಏನು ಮಾಡುತ್ತೀರಿ? ಸಚಿವರ ಕೆಲಸ ಅದಲ್ಲ, RSS ಏನು ಎಂಬುದನ್ನು ಜನರನ್ನು ಕೇಳಿದರೆ ಹೇಳುತ್ತಾರೆ ಎಂದು ನುಡಿದರು.

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನಲ್ಲಿ ದುಡಿದಿದ್ದಾರೆ ಎಂದು ಇವನಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ, ಅವನಿಗೆ ತಲೆ ಇಲ್ಲ, ಸುಮ್ಮನೆ ಕೆಲಸ ಮಾಡಿ ಸಚಿವ ಖಾತೆಯಲ್ಲಿ ಹೆಸರು ಗಳಿಸಲಿ ಎಂದು ಸಲಹೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News