×
Ad

RSS ದಾಖಲೆ ತೋರಿಸಲು ಸಿದ್ಧವಿದ್ದರೆ ಬಿಜೆಪಿ ನಾಯಕರೇಕೆ ಮೋಸ ಹೋದ ಪ್ರೇಮಿಗಳಂತೆ ಮಾಡುತ್ತಿದ್ದಾರೆ? : ಪ್ರಿಯಾಂಕ್ ಖರ್ಗೆ ಪ್ರಶ್ನೆ

Update: 2026-06-17 21:28 IST

 ಗೃಹ ಸಚಿವ ಪ್ರಿಯಾಂಕ್ ಖರ್ಗೆ (Photo: X)

ಬೆಂಗಳೂರು : RSSನ ಹಣಕಾಸು ವ್ಯವಹಾರಗಳು ಮತ್ತು ಅದರ ಕಾನೂನುಬದ್ಧ ಸ್ಥಿತಿಗತಿ ಕುರಿತ ಚರ್ಚೆಯು ಕಾವೇರುತ್ತಿರುವ ನಡುವೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಮೋಹನ್ ಭಾಗವತ್ ಅವರ ಪ್ರಕಾರ, RSS ಸ್ವಯಂ ಸೇವಕರ ಸಂಘಟನೆಯಾಗಿದ್ದು, ಅದನ್ನು ನೋಂದಾಯಿಸುವ ಅಗತ್ಯವಿಲ್ಲ. ಸ್ವಯಂ ಸೇವಕರ ಸಂಘಟನೆಯಾಗಿರುವ ಕಾರಣ ಅದು ತೆರಿಗೆ ಪಾವತಿಸುವುದಿಲ್ಲ. ಸಂಘಟನೆಯು “ಗುರು ದಕ್ಷಿಣೆ” ರೂಪದಲ್ಲಿ ಹಣವನ್ನು ಸ್ವೀಕರಿಸುತ್ತದೆ’ ಎಂದು ಖರ್ಗೆ ಉಲ್ಲೇಖಿಸಿದ್ದಾರೆ.

‘RSSಗೆ ಆರ್ಥಿಕ ಚಟುವಟಿಕೆಗಳಿದ್ದು, ಪ್ರತಿಯೊಂದು ರೂಪಾಯಿಯ ಲೆಕ್ಕವನ್ನೂ ನಿರ್ವಹಿಸಲಾಗುತ್ತದೆ ಹಾಗೂ ಲೆಕ್ಕಪರಿಶೋಧನೆ ನಡೆಸಲಾಗುತ್ತದೆ. ಸರಕಾರ ಆಡಿಟ್ ಅಥವಾ ಇತರೆ ಯಾವುದೇ ವರದಿಗಳನ್ನು ಸಲ್ಲಿಸುವಂತೆ ಕೇಳಿದರೆ, ಕಾನೂನುಬದ್ಧ ಸಂಸ್ಥೆಯಾಗಿರುವ ಕಾರಣ ಅವುಗಳನ್ನು ತಕ್ಷಣವೇ ಒದಗಿಸಲು RSS ಸಿದ್ಧವಿದೆ’ ಎಂದು ಭಾಗವತ್‌ ಅವರ ಹೇಳಿಕೆಯನ್ನು ಖರ್ಗೆ ಅವರು ತಿಳಿಸಿದ್ದಾರೆ.

‘RSS ಮುಖ್ಯಸ್ಥರು ಸ್ವತಃ ಎಲ್ಲ ದಾಖಲೆಗಳನ್ನು ತೋರಿಸಲು ಸಿದ್ಧರಿದ್ದರೆ, ಬಿಜೆಪಿ ನಾಯಕರು ಮೋಸಹೋದ ಪ್ರೇಮಿಗಳಂತೆ ಏಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ?’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News