NEET ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವೈಷ್ಣವಿ ದಾಸ್
ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಸ್ಥಾನ ಪಡೆದಿರುವ ಬೆಂಗಳೂರಿನ ಜೆ.ಪಿ.ನಗರದ ಶ್ರೀ ಚೈತನ್ಯ ಟೆಕ್ನೋ ಶಾಲೆಯ ವಿದ್ಯಾರ್ಥಿನಿ ವೈಷ್ಣವಿ ದಾಸ್ 720ಕ್ಕೆ 700 ಅಂಕಗಳನ್ನು ಪಡೆದು ಅಖಿಲ ಭಾರತ ಮಟ್ಟದಲ್ಲಿ 20ನೇ ರ‍್ಯಾಂಕ್ ಗಳಿಸಿದ್ದಾರೆ.
ಎನ್‍ಟಿಎ ಪ್ರಕಟಿಸಿದ್ದ ಕೀ ಉತ್ತರದ ಪ್ರಕಾರ ತಮಗೆ 710 ಅಂಕಗಳು ಬರಬೇಕಾಗಿತ್ತು. ಈ 10 ಅಂಕಗಳ ವ್ಯತ್ಯಾಸದಿಂದ ನನ್ನ ಅಖಿಲ ಭಾರತ ರ‍್ಯಾಂಕ್ ಮೇಲೂ ಪರಿಣಾಮ ಬೀರಿದೆ ವೈಷ್ಣವಿ ದಾಸ್ ಎಂದು ತಿಳಿಸಿದ್ದಾರೆ.
ದಾವಣಗೆರೆಯ ಎಂ.ಸುಚಿತಾ 695 ಅಂಕಗಳೊಂದಿಗೆ ರಾಜ್ಯದಲ್ಲಿ ಎರಡನೇ ಹಾಗೂ ದೇಶದಲ್ಲಿ 48ನೇ ರ‍್ಯಾಂಕ್ ಪಡೆದಿದ್ದಾರೆ. ಅವರು ನಾಲ್ಕೂ ವಿಷಯಗಳ ಎಲ್ಲ ಪ್ರಶ್ನೆಗಳಿಗೂ ಸರಿಯಾದ ಉತ್ತರ ನೀಡಿದ್ದು, ಕೀ ಉತ್ತರದ ಪ್ರಕಾರ 720ಕ್ಕೆ 720 ಅಂಕಗಳು ಬರಬೇಕಾಗಿತ್ತು. ಆದರೆ ಅಂತಿಮ ಫಲಿತಾಂಶದಲ್ಲಿ 25 ಅಂಕಗಳು ಕಡಿಮೆಯಾಗಿರುವುದು ಬೇಸರ ತಂದಿದೆ ಎಂದು ಹೇಳಿದ್ದಾರೆ.
ನೀಟ್-2026ರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಉತ್ತಮ ಸಾಧನೆ ದಾಖಲಿಸಿದ್ದಾರೆ. ಪ್ರಮುಖ ಸಾಧಕರ ಪಟ್ಟಿಯಲ್ಲಿ ರವಿಕಿರಣ್ ಕಿಣಿ (ಎಐಆರ್-62), ಬೆಂಗಳೂರಿನ ಅಲೆನ್ ಸಂಸ್ಥೆಯ ಬಿ.ಎಸ್. ದಿಗಂತ್ (ಎಐಆರ್-64), ಜೋಹಾನ್ ಜಾಬ್ (ಎಐಆರ್-69) ಹಾಗೂ ಜೆ. ಶ್ರೇಯಾಂಕ್ (ಎಐಆರ್-94) ಕೂಡ ಸ್ಥಾನ ಪಡೆದಿದ್ದಾರೆ.