×
Ad

ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ನೀಡಲಿ: ಬಿಜೆಪಿಗೆ ಕಾಂಗ್ರೆಸ್ ಸವಾಲು

Update: 2024-01-04 13:10 IST

ಬೆಂಗಳೂರು, ಜ.4: ಹುಬ್ಬಳ್ಳಿಯಲ್ಲಿ 3 ದಶಕಗಳ ಹಿಂದಿನ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿ ಶ್ರೀಕಾಂತ್ ಪೂಜಾರಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಬದಲು ಟಿಕೆಟ್ ನೀಡಲಿ ಎಂದು ಬಿಜೆಪಿಗೆ ಕಾಂಗ್ರೆಸ್ ಸವಾಲೆಸೆದಿದೆ.



ಈ ಬಗ್ಗೆ ಸಾಮಾಜಿಕ ಜಾಲತಾಣ 'X'ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, 'ಕಳ್ಳಭಟ್ಟಿ, ಮಟ್ಕಾ ದಂಧೆಕೋರ ಶ್ರೀಕಾಂತ್ ಪೂಜಾರಿ 16 ಪ್ರಕರಣದಲ್ಲಿ ಭಾಗಿಯಾಗುವ ಮೂಲಕ ಬಿಜೆಪಿ ಅಭ್ಯರ್ಥಿಯಾಗುವ ಮಾನದಂಡಗಳನ್ನು ಪೂರೈಸಿ ಅರ್ಹತೆ ಪಡೆದಿದ್ದಾನೆ! ಆತನ ಮೇಲೆ ಬಿಜೆಪಿಗೆ ಕಾಳಜಿ, ಪ್ರೀತಿ ಇದ್ದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿ ಬದಲು ಶ್ರೀಕಾಂತ್ ಪೂಜಾರಿಗೆ ಟಿಕೆಟ್ ನೀಡಲಿ! ಹೊಸ ಪ್ರತಿಭೆಯನ್ನು ಪರಿಚಯಿಸಲಿ' ಎಂದು ವ್ಯಂಗ್ಯವಾಡಿದೆ.

'ಕ್ರಿಮಿನಲ್ ಗಳಿಗೆ, ಕಳ್ಳರಿಗೆ, ಅತ್ಯಾಚಾರಿಗಳಿಗೆ, ರೌಡಿಗಳಿಗೆ ಬಿಜೆಪಿಯಲ್ಲಿ ಮನ್ನಣೆ ಎನ್ನುವುದು ಚಿತ್ತಾಪುರ ಕ್ಷೇತ್ರದಲ್ಲಿ ತೋರಿಸಿಕೊಟ್ಟಿದೆ. ಮೋದಿ ರೌಡಿ ಶೀಟರ್ಗೆ ಕೈ ಮುಗಿದು ನಿಲ್ಲುವ ಮೂಲಕ ಸಮಾಜಘಾತುಕ ಶಕ್ತಿಗಳೇ ಬಿಜೆಪಿಯ ಶಕ್ತಿ ಎಂಬುದು ನಿರೂಪಿತವಾಗಿದೆ' ಎಂದು ಕಾಂಗ್ರೆಸ್ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News