×
Ad

ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ ಎಂದ ನಿಖಿಲ್‌ ಕುಮಾರಸ್ವಾಮಿ

Update: 2023-09-17 22:43 IST

Photo- Twitter@Bandeppakoffice

ಬೀದರ್: ʼರಾಜಕೀಯದಿಂದ ದೂರ ಉಳಿಬೇಕು ಎಂದು ತೀರ್ಮಾನ ಮಾಡಿದ್ದೇನೆʼ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಮಗ, ನಟ ನಿಖಿಲ್‌ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ರವಿವಾರ ನಡೆದ ಅವರ ಗನ್‌ಮ್ಯಾನ್‌ ಮದುವೆಯಲ್ಲಿ ಭಾಗವಹಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

ʼʼಜೆಡಿಎಸ್‌ ಪಕ್ಷ ಲೋಕಸಭಾ ಚುನಾವಣೆಗೆ ಎಲ್ಲೆಲ್ಲಿ ಸ್ಪರ್ಧೆ ಮಾಡಬೇಕು ಅಂತ ಶೀಘ್ರವೇ ಪಕ್ಷದ ಹಿರಿಯರು ತಿಳಿಸುತ್ತಾರೆ. ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತನಾಗಿ ಓಡಾಡುತ್ತೇನೆʼʼ ಎಂದು ತಿಳಿಸಿದರು. 

ʼʼಒಂದು ಪ್ರಾದೇಶಿಕ ಪಕ್ಷ ಕಟ್ಟೋದು ಬಹಳ ಕಷ್ಟ. ಮಾನ್ಯ ದೇವೇಗೌಡರು ಹೋರಾಟದ ಶ್ರಮದಿಂದ ಹಾಗೂ ಉತ್ಸಾಹಿ ಕಾರ್ಯಕರ್ತರಿಂದ ಪಕ್ಷ ಕಟ್ಟಲಾಗಿದೆ. ಕುಮಾರಸ್ವಾಮಿ ಬಹಳ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಿದ್ದಾರೆ. ಬಹಳಷ್ಟು ಹಿರಿಯ ನಾಯಕರ ಕೊಡುಗೆ ಈ ಪಕ್ಷಕ್ಕೆ ಇದೆʼʼ ಎಂದು ಇದೇ ವೇಳೆ ನಿಖಿಲ್​ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News