×
Ad

ದಲಿತರ ಪರವಾಗಿ ಯಾರೂ ಕೈ ಎತ್ತಿಲ್ಲ: ಬಿ.ವೈ ವಿಜಯೇಂದ್ರ ನೇಮಕಕ್ಕೆ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ

Update: 2023-11-14 23:41 IST

ರಮೇಶ ಜಿಗಜಿಣಗಿ 

ವಿಜಯಪುರ, ನ.14: 'ವಿಜಯೇಂದ್ರರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ದೊಡ್ಡವರ ಕೆಲಸ' ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪಕ್ಷದ ಹಿರಿಯರು ಅವರದೇ ಆದ ಕಾರಣಕ್ಕೆ ವಿಜಯೇಂದ್ರರನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಬಹಳ ಯೋಚನೆ ಮಾಡಿ ಯಡಿಯೂರಪ್ಪರ ಮಗನೇ ಆಗಬೇಕು ಎಂದು ನೇಮಕ ಮಾಡಿದ್ದಾರೆ'' ಎಂದು ಹೇಳಿದರು.

ವಿಜಯೇಂದ್ರ ಅಧ್ಯಕ್ಷ ಆಗಿರೋದರಿಂದ ನಮಗೇನೂ ಹೊಟ್ಟೆ ಉರಿ ಇಲ್ಲ.‌ ನಾನೇನು ರಾಜ್ಯದ ಅಧ್ಯಕ್ಷ ಆಗಬೇಕು ಅಂದವನೂ ಸಹ ಅಲ್ಲ. ಅದರ ಕನಸೂ ನಾವು ಕಂಡಿಲ್ಲ. ಕಳೆದ 75 ವರ್ಷಗಳಿಂದ ದೊಡ್ಡ ದೊಡ್ಡ ಗೌಡರು-ಸಾಹುಕಾರರಿಗೆ ಕೈಎತ್ತಿಕೊಂಡೇ ಬಂದಿದ್ದೇವೆ. ಆದರೆ ನೀಡುವ ಹಂತದಲ್ಲಿ ದಲಿತರ ಪರವಾಗಿ ಯಾರೂ ಕೈ ಎತ್ತಿಲ್ಲ. ಇದು ದುಖದ ಸಂಗತಿ ಎಂದು ಅವರು ಅಸಮಾಧಾನ ಹೊರ ಹಾಕಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News