×
Ad

ರೈತರನ್ನು ಅವಮಾನಿಸುವವರನ್ನು ಸಂಪುಟದಿಂದ ವಜಾ ಮಾಡಿ: ಬಿ.ವೈ. ವಿಜಯೇಂದ್ರ ಆಗ್ರಹ

Update: 2023-12-25 12:07 IST

ಬೆಂಗಳೂರು: ರಾಜ್ಯ ಸರಕಾರದ ಸಚಿವರು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿ ರೈತರನ್ನು ಅವಮಾನಿಸುತ್ತಿದ್ದಾರೆ. ಅಂಥ ಸಚಿವರಿಗೆ ಮುಖ್ಯಮಂತ್ರಿಗಳು ಬುದ್ಧಿವಾದ ಹೇಳಲಿ, ತಿದ್ದಿಕೊಳ್ಳದ ಸಚಿವರ ರಾಜೀನಾಮೆ ಪಡೆಯಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದರು.

ಸೋಮವಾರ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಶಿವಾನಂದ್‌ ಪಾಟೀಲರ ಹೇಳಿಕೆ ಖಂಡನಾರ್ಹ ಎಂದರು. ಮತ್ತೆ ಅವರು ರೈತರನ್ನು ಅವಮಾನ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಅನ್ನ ಕೊಡುವ ರೈತರ ಬಗ್ಗೆ ಸಚಿವರ, ಸರಕಾರದ ಧೋರಣೆ ಆಕ್ಷೇಪಾರ್ಹ, ದೆಹಲಿ ಪ್ರವಾಸದ ವೇಳೆ ಜಮೀರ್ ಅಹ್ಮದ್ ಅವರ ವರ್ತನೆಯನ್ನೂ ಅವರು ಖಂಡಿಸಿದರು.

ಬರಗಾಲ ಸಂಬಂಧ ರೈತರಿಗೆ ಸಮರ್ಪಕ ಪರಿಹಾರ ನೀಡದ ಸರಕಾರ ಇದು ಎಂದು ನುಡಿದರು. ರೈತರಿಗೆ ಪದೇ ಪದೇ ಅವಮಾನ ಮಾಡುವ ಸರ್ಕಾರ, ಸಚಿವರ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News