×
Ad

ಸನಾತನ ಎಂಬುದು ಧರ್ಮವೇ ಅಲ್ಲ: ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2023-09-05 21:27 IST

ಮೈಸೂರು, ಸೆ.5: ಸನಾತನ ಎಂಬುದು ‘ಧರ್ಮವೇ ಅಲ್ಲ, ಅದೊಂದು ಇಸಂ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಚ್.ಸಿ. ಮಹದೇವಪ್ಪ, ʼಸನಾತನ ಎಂಬುದು ಧರ್ಮವೇ ಅಲ್ಲ, ಅದೊಂದು ಇಸಂ. ಇದು ಸಂವಿಧಾನದಲ್ಲಿ ಎಲ್ಲೂ ಇಲ್ಲ. ನಾವೆಲ್ಲರೂ ದ್ರಾವಿಡರು, ದ್ರಾವಿಡ ಮೂವ್‌ಮೆಂಟ್ ಹಿಂದಿನಿಂದಲೂ ನಿರಂತರವಾಗಿ ಬಂದಿದೆ. ಇದನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲʼ ಎಂದು ಹೇಳಿದರು.

ʼಯಾವುದೇ ಒಂದು ಧರ್ಮದ ಆಚರಣೆ ಇನ್ನೊಬ್ಬರಿಗೆ ನೋವಾಗದಂತೆ ನೋಡಿಕೊಳ್ಳವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆʼ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News