ಬೆಂಗಳೂರು : ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಈ.ಡಿ.) ಅಧಿಕಾರಿಗಳು ಗುರುವಾರವೂ ಶೋಧ ಕಾರ್ಯ ಮುಂದುವರೆಸಿದ್ದು, ಅರೆಸೇನಾ ಪಡೆಯ ಭದ್ರತೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ, 3 ಕೋಟಿ ರೂ.ಗೂ ಅಧಿಕ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಬುಧವಾರ ತಡರಾತ್ರಿ 2 ಗಂಟೆಯ ವರೆಗೆ ವಿಚಾರಣೆ ನಡೆಸಿದ್ದ ಈ.ಡಿ. ಅಧಿಕಾರಿಗಳು, ಮತ್ತೆ ಗುರುವಾರ ಬೆಳಗ್ಗೆ 6 ಗಂಟೆಯಿಂದ ಮತ್ತೆ ಈ.ಡಿ. ಅಧಿಕಾರಿಗಳು ದಾಳಿ ನಡೆಸಿ, ಸಂಜೆಯ ವರೆಗೆ ದಾಖಲೆಗಳನ್ನು ಪರಿಶೀಲಿಸಿದರು.

ಎರಡು ದಿನಗಳ ಕಾಲ ಬೆಂಗಳೂರು, ಬೆಳಗಾವಿ, ಗೋಕಾಕ್‌ನಲ್ಲಿ 18 ಕಡೆ ದಾಳಿ ಮಾಡಿ ದಾಖಲೆ ಪರಿಶೀಲಿಸಿದ ಈ.ಡಿ. ಅಧಿಕಾರಿಗಳು, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ಮನೆಯಲ್ಲಿ 1.20 ಕೋಟಿ ರೂ. ಸೇರಿದಂತೆ ಸತೀಶ್ ಜಾರಕಿಹೊಳಿ ಮನೆಯಲ್ಲಿ 3 ಕೋಟಿ ರೂ.ಗೂ ಅಧಿಕ ಹಣವನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

'ಜಾರಿ ನಿರ್ದೇಶನಾಲಯವು ದೇಶದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಂಡಿದೆ. ರಾಜ್ಯದಲ್ಲಿ ಎಂಟು ಮಂದಿ ಕಾಂಗ್ರೆಸ್ ಮುಂಖಡರ ಮನೆಗಳ ಮೇಲೆ ಈ.ಡಿ. ದಾಳಿಯಾಗಬಹುದು ಎಂದು ತಿಳಿದು ಬಂದಿತ್ತು. ನನ್ನ ಹೆಸರು ಕೊನೆಯಲ್ಲಿರಬಹುದು ಎಂದು ಊಹಿಸಿದ್ದೆ. ಆದರೆ ನನ್ನ ನಿವಾಸಗಳ ಮೇಲೆ ಮೊದಲು ದಾಳಿ ಮಾಡಿದ್ದಾರೆ. ಇದೀಗ ನಡೆದಿರುವ ಈ.ಡಿ. ದಾಳಿಯಲ್ಲಿ ರಾಜಕೀಯ ವಾಸನೆ ಬರುತ್ತಿದೆ'

- ಸತೀಶ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor