×
Ad

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: 4 ಸಾವಿರಕ್ಕೂ ಅಧಿಕ ಮಂದಿ ಗೈರು

Update: 2023-08-21 23:06 IST

ಬೆಂಗಳೂರು, ಆ.21: ದ್ವಿತೀಯ ಪಿಯುಸಿಯ ಎರಡನೆ ಬಾರಿ ಪೂರಕ ಪರೀಕ್ಷೆಯ ಕನ್ನಡ ಭಾಷ ವಿಷಯದಲ್ಲಿ 4,096 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಪರೀಕ್ಷೆಗೆ ನೋಂದಣಿ ಮಾಡಿಕೊಂಡ 36,448 ವಿದ್ಯಾರ್ಥಿಗಳ ಪೈಕಿ 32,352 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

ಮೊದಲ ಪೂರಕ ಪರೀಕ್ಷೆ ಜೂನ್ ತಿಂಗಳಿನಲ್ಲಿ ನಡೆಸಲಾಗಿದ್ದು, ಅದರಲ್ಲಿ ಅನುತ್ತೀರ್ಣರಾದವರಿಗೆ ಎರಡನೆ ಬಾರಿ ಪೂರಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News