×
Ad

ಎಸ್‍ಐಆರ್ | ಮೊದಲ ದಿನ 12.48 ಲಕ್ಷ ಎನ್ಯುಮರೇಷನ್ ಫಾರಂ ವಿತರಣೆ : ಮುಖ್ಯ ಚುನಾವಣಾಧಿಕಾರಿ

Update: 2026-06-30 20:06 IST

ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್

ಬೆಂಗಳೂರು : ರಾಜ್ಯದಲ್ಲಿ ಆರಂಭವಾದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‍ಐಆರ್) ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಮಂಗಳವಾರ ಮೊದಲ ದಿನ ಒಟ್ಟು 12,48,314 ಎನ್ಯುಮರೇಷನ್ ಫಾರಂಗಳನ್ನು ಬೂತ್ ಮಟ್ಟದ ಅಧಿಕಾರಿ(ಬಿಎಲ್‍ಒ)ಗಳು ಮತದಾರರಿಗೆ ವಿತರಣೆ ಮಾಡಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಈ ಪೈಕಿ 47,817 ಎನ್ಯುಮರೇಷನ್ ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆನ್‍ಲೈನ್ ಮೂಲಕ 6,840 ಮಂದಿ ಮತದಾರರು ಎನ್ಯುಮರೇಷನ್ ಫಾರಂಗಳನ್ನು ಭರ್ತಿ ಮಾಡಿದ್ದಾರೆ. 116 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ, 291 ಮತದಾರರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.

ಎನ್ಯುಮರೇಷನ್ ಫಾರಂ ವಿತರಣೆ: ಹಾಸನದಲ್ಲಿ ಅತೀ ಹೆಚ್ಚು 1,46,025, ನಂತರದ ಸ್ಥಾನದಲ್ಲಿ ದಾವಣಗೆರೆ- 1,07,802, ಕಲಬುರಗಿ-79,375, ಯಾದಗಿರಿ-78,280, ಬೆಳಗಾವಿ-75,052, ತುಮಕೂರು-66,304, ಉತ್ತರ ಕನ್ನಡ-61,476, ರಾಯಚೂರು-52,510, ಚಿಕ್ಕಬಳ್ಳಾಪುರ-45,818, ದಕ್ಷಿಣ ಕನ್ನಡ-19,991, ಉಡುಪಿ-14,202, ಬೆಂಗಳೂರು ನಗರ-14,405, ಬಿಬಿಎಂಪಿ ಕೇಂದ್ರ-12,122, ಬಿಬಿಎಂಪಿ ಉತ್ತರ-23,221, ಬೆಂಗಳೂರು ದಕ್ಷಿಣ-10,620, ಬಾಗಲಕೋಟೆ-40,311 ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತೀ ಕಡಿಮೆ 3,923 ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಾಗಿದೆ.

ಎನ್ಯುಮರೇಷನ್ ಫಾರಂಗಳ ಡಿಜಿಟಲೀಕರಣ: ರಾಯಚೂರು-7866, ಕೊಪ್ಪಳ-3903, ಚಿಕ್ಕಬಳ್ಳಾಪುರ-3126, ಬಳ್ಳಾರಿ-3092, ಬಾಗಲಕೋಟೆ-2226 ಎನ್ಯುಮರೇಷನ್ ಫಾರಂಗಳನ್ನು ಡಿಜಿಟಲೀಕರಣಗೊಳಿಸಿದ್ದರೆ, ಕೊಡಗು ಜಿಲ್ಲೆಯಲ್ಲಿ ಅತೀ ಕಡಿಮೆ 82 ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News