ಮೋದಿ, ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಸಾಮಾಜಿಕ ಜಾಲತಾಣ ಖಾತೆ ಬಂದ್: ಕಾಂಗ್ರೆಸ್ ಆರೋಪ
ಮೆಟಾದಿಂದ 54.4 ಲಕ್ಷ ಪೋಸ್ಟ್‌ಗಳಿಗೆ ನಿರ್ಬಂಧ
ಸಾಂದರ್ಭಿಕ ಚಿತ್ರ | Photo credit : AI
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರೆ ಕ್ಷಣಾರ್ಧದಲ್ಲಿ ಖಾತೆಯನ್ನೇ ಬಂದ್ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಇದುವರೆಗೆ ಮೆಟಾ ಸಂಸ್ಥೆಯು ಇಂತಹ ಬರೋಬ್ಬರಿ 54.4 ಲಕ್ಷ ಪೋಸ್ಟ್‌ಗಳಿಗೆ ನಿರ್ಬಂಧ ವಿಧಿಸಿದೆ ಎಂದು ಹೇಳಿದೆ.
ಕಳೆದ 12 ವರ್ಷಗಳಲ್ಲಿ ಒಂದು ದಿನವೂ ಮಾಧ್ಯಮಗಳ ಮುಂದೆ ಬಾರದ, ಜನರು ಕೇಳುವ ಪ್ರಶ್ನೆಗಳಿಗೂ ಉತ್ತರಿಸದ ಮೋದಿ ಸರ್ಕಾರದ ಸರ್ವಾಧಿಕಾರಿ ಪ್ರವೃತ್ತಿಗೆ ಇದಕ್ಕಿಂತ ಬೇರೆ ಉದಾಹರಣೆ ಬೇಕೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.