×
Ad

‘ಆನ್‍ಲೈನ್ ಮೂಲಕ ಸಮೀಕ್ಷೆ’ಯಲ್ಲಿ ಭಾಗವಹಿಸಲು ನಾಳೆ(ನ.10) ಕೊನೆಯ ದಿನ

Update: 2025-11-09 21:26 IST

ಬೆಂಗಳೂರು : ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದ್ದು, ಆನ್‍ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ನಾಳೆ(ನ.10) ಕೊನೆಯ ದಿನವಾಗಿದೆ. ಇದುವರೆಗೆ 6.13 ಕೋಟಿ ಜನರ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಹಿಂದುಳಿದ ವರ್ಗಗಳ ಆಯೋಗವು ಮಾಹಿತಿ ನೀಡಿದೆ.

ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ವರ್ಗ ಸೇರಿ ಎಲ್ಲ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆ.22ರಿಂದ ಆರಂಭಿಸಲಾಗಿತ್ತು. ಅ.31ರವರಗೆ ಸಮೀಕ್ಷಾದಾರರನ್ನು ನೇಮಕ ಮಾಡಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ಮಾಡಲಾಯಿತು.

ನಿಗದಿತ ಜನರ ಸಮೀಕ್ಷೆಯನ್ನು ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ನ.10ವರೆಗೆ ಆನ್‍ಲೈನ್ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಸಮೀಕ್ಷೆಯಿಂದ ದೂರ ಉಳಿದವರು https://kscbcselfdeclaration.karnataka.gov.in  ವೆಬ್‍ಸೈಟ್‍ಗೆ ಸಂಪರ್ಕಿಸಿ, ಈ ಆನ್‍ಲೈನ್ ಸಮೀಕ್ಷೆಯಲ್ಲಿ ಭಾಗವಹಿಸಬಹುದಾಗಿದೆ.

ಇದುವರೆಗೆ ರಾಜ್ಯದಲ್ಲಿ 6,85,38,000 ಜನರ ಪೈಕಿ 6,13,83,908 ಜನರ ಸಮೀಕ್ಷೆಯು ಪೂರ್ಣಗೊಂಡಿದೆ. ಮಂಡ್ಯದಲ್ಲಿ 18,99,244, ತುಮಕೂರು 28,10,455, ಹಾವೇರಿ 17,54,508, ಚಿತ್ರದುರ್ಗ 18,03,528, ಚಿಕ್ಕಮಗಳೂರು 11,01,358, ಉಡುಪಿ 11,60,247, ಗದಗ 11,18,183, ಕೊಪ್ಪಳ 16,04,704, ದಾವಣಗೆರೆ 17,05,682, ಚಾಮರಾಜನಗರ 10,17,424, ಬಾಗಲಕೋಟೆ ಜಿಲ್ಲೆಯಲ್ಲಿ 20,90,247 ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ.

ಬಳ್ಳಾರಿ 15,57,119, ಬೆಳಗಾವಿ 50,41,610, ಬೆಂಗಳೂರು ಗ್ರಾಮಾಂತರ 11,07,140, ಬೆಂಗಳೂರು ನಗರ 13,51,670, ಬೀದರ್ 17,27,984, ದಕ್ಷಿಣ ಕನ್ನಡ 20,83,284, ಉತ್ತರ ಕನ್ನಡ 14,27,819, ಹಾಸನ 17,04,564, ಶಿವಮೊಗ್ಗ 17,63,930, ರಾಯಚೂರು 21,67,126, ಕಲಬುರಗಿ 28,66,066, ಕೊಡಗು ಜಿಲ್ಲೆಯಲ್ಲಿ 5,11,119 ಮಂದಿಯ ಸಮೀಕ್ಷೆ ಪೂರ್ಣಗೊಂಡಿದೆ.

ವಿಜಯನಗರ 15,34,710, ಯಾದಗಿರಿ 13,23,881, ಧಾರವಾಡ 18,88,791, ಬೆಂಗಳೂರು ದಕ್ಷಿಣ 10,60,764, ಮೈಸೂರು ಜಿಲ್ಲೆಯಲ್ಲಿ 31,51,631 ಮಂದಿಯ ಸಮೀಕ್ಷೆ ಪೂರ್ಣಗೊಂಡಿದ್ದು, ಉಳಿದವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News