×
Ad

ಆರೆಸ್ಸೆಸ್ ಒಪ್ಪಿಕೊಳ್ಳುವವರು ದೇಶ ವಿರೋಧಿಗಳು: ಸಚಿವ ಶಿವರಾಜ್ ತಂಗಡಗಿ

Update: 2025-10-18 23:02 IST

ಕೊಪ್ಪಳ: ಆರೆಸ್ಸೆಸ್ ಅನ್ನು ಯಾರು ಒಪ್ಪಿಕೊಳುತ್ತಾರೋ ಅವರು ದೇಶ ಪ್ರೇಮಿಗಳಲ್ಲ, ದೇಶ ವಿರೋಧಿಗಳು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು.

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಯ ಅವರು, ರಾಷ್ಟ್ರಪಿತ ಮಹಾತ್ಮ ಗಾಂಧಿ, ದೇಶದ ಸಂವಿಧಾನ, ಅಂಬೇಡ್ಕರ್ ಅವರನ್ನು, ದೇಶದ ಧ್ವಜವನ್ನು ಮತ್ತು ರಾಷ್ಟ್ರ ಗೀತೆ ಮತ್ತು ರಾಷ್ಟ್ರ ಧ್ವಜವನ್ನು ಒಪ್ಪದ ಆರೆಸ್ಸೆಸ್ ಅನ್ನು ಯಾವ ಅರ್ಥದಲ್ಲಿ ದೇಶ ಪ್ರೇಮಿ ಸಂಸ್ಥೆ ಎಂದು ಕರೆಯಬೇಕು ಎಂದು ಪ್ರಶ್ನಿಸಿದರು.

ಆರೆಸ್ಸೆಸ್ ಪ್ರಧಾನ ಕಚೇರಿಯ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿಲ್ಲ, ಪಥಸಂಚಲದಲ್ಲಿ ನೀವು ಬಡಿಗೆ ( ಕೋಲು) ಹಿಡಿದುಕೊಂಡು ಪಥಸಂಚಲ ಮಾಡುತ್ತೀರಿ. ಅದೇ ರೀತಿ ಬೇರೆ ಯಾರಾದರೂ ಕೋಲು ಅಥವಾ ಮತ್ಯದೋ ಆಯುಧ ಹಿಡಿದು ಕೊಂಡು ಹೋದರೆ ಅವರ ಮೇಲೆ ಎಫ್ ಐ ಆರ್ ಮಾಡುಸುತ್ತೀರಿ ಎಂದರು.

ಆರೆಸ್ಸೆಸ್ ನವರು ದೇಶ ಭಕ್ತಿ ಎಂದು ಹೇಳುತ್ತಾರೆ‌, ಆದರೆ ಅವರು ದೇಶ ಭಕ್ತಿಯ ಒಂದು ಕೆಲಸ ತೋರಿಸಲಿ, ಅವರು ದೇಶದ ಸ್ವತಂತ್ರಕ್ಕಾಗಿ ಹೋರಾಟ ಮಾಡಿದ್ದಾರಾ? ಎಂದು ಪ್ರಶ್ನಿಸಿದ ಅವರು, ಆರೆಸ್ಸೆಸ್ ಇದುವರೆಗೂ ನೋಂದಣಿಯೇ ಆಗಿಲ್ಲ. ಆರೆಸ್ಸೆಸ್ ದೇಶ ಭಕ್ತಿ ಸಂಸ್ಥೆ ಅಲ್ಲ. ಇದೊಂದು ಕೋಮುವಾದಿ ಸಂಸ್ಥೆ. ದೇಶ ಪ್ರೇಮಿ ಆಗಿದ್ದರೆ ಪಥಸಂಚಲನಾದಲ್ಲಿ ರಾಷ್ಟ್ರ ಧ್ವಜ ಹಿಡಿಯಲಿ ಎಂದರು.

ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಬ್ಯಾನ್ ಮಾಡಿ ಎಂದು ಹೇಳಲಿಲ್ಲ. ಸರ್ಕಾರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಯಾರೇ ಕಾರ್ಯಕ್ರಮಗಳು ಮಾಡಿದರೂ ಅನುಮತಿ ಪಡೆದು ಮಾಡಲಿ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಏನಾಗಿದೆಯೋ ಗೊತ್ತಿಲ್ಲ. ಆದರೆ ಮುಂದೆ ಅನುಮತಿ ಕಡ್ಡಾಯ ಎಂದು ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News