×
Ad

ತೇಜಸ್ವಿ ಸೂರ್ಯ ಹೇಳುವ ಸುಳ್ಳನ್ನು ಕೇಳಿದರೆ ಸತ್ಯ ʼಸೂಸೈಡ್ʼ ಮಾಡಿಕೊಳ್ಳುತ್ತದೆ : ಕಾಂಗ್ರೆಸ್ ಲೇವಡಿ

Update: 2024-02-07 18:51 IST

ಬೆಂಗಳೂರು: ‘ಬಿಜೆಪಿಯವರು, ಅದರಲ್ಲೂ ಸಂಸದ ತೇಜಸ್ವಿ ಸೂರ್ಯ ಎನ್ನುವ ಅಡ್ಡ ಕಸುಬಿ ವ್ಯಕ್ತಿ ಹೇಳುವ ಸುಳ್ಳನ್ನು ಕೇಳಿದರೆ ಸತ್ಯ ಹೋಗಿ ಸೂಸೈಡ್ ಮಾಡಿಕೊಳ್ಳುತ್ತದೆ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಬುಧವಾರ ʼಎಕ್ಸ್‌ʼ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‘ಈ ಸುಳ್ಳು ಅನ್ನತಕ್ಕಂತಹದ್ದೇನಿದೆ ಅದು ಬಿಜೆಪಿಯವರ ಎನ್‍ಡಿಎಯಲ್ಲೇ ಅಡಕವಾಗಿದೆ. ಸಾರ್ವಜನಿಕ ಲಜ್ಜೆ ಎನ್ನುವುದನ್ನು ಸಂಪೂರ್ಣ ಕೈಬಿಟ್ಟಿರುವ ಬಿಜೆಪಿ ಸುಳ್ಳು ಹೇಳಿದರೆ ಜನರೆದುರು ಮುಖಭಂಗಕ್ಕೆ ಒಳಗಾಗುತ್ತೇವೆ ಎನ್ನುವ ಕನಿಷ್ಠ ಪ್ರಜ್ಞೆ ಇಲ್ಲದೆ ಸುಳ್ಳು ಹೇಳುತ್ತಾರೆ’ ಎಂದು ಟೀಕಿಸಿದೆ.

‘15ನೆ ಹಣಕಾಸು ಆಯೋಗವು ಕರ್ನಾಟಕ ರಾಜ್ಯಕ್ಕೆ ನಯಾಪೈಸೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಯೇ ಇಲ್ಲ ಎಂದು ಸತ್ಯದ ತಲೆ ಮೇಲೆ ಹೋದಂತಹ ಸುಳ್ಳು ಹೇಳಿದ ತೇಜಸ್ವಿ ಸೂರ್ಯ ಎನ್ನುವ ಎಳೆಕೂಸು ಆಯೋಗದ ವರದಿಯನ್ನು ಓದಿಲ್ಲವೇ ಅಥವಾ ಸತ್ಯವನ್ನು ಕಗ್ಗೊಲೆ ಮಾಡಲು ಮುಂದಾಗಿದ್ದೇ?, ಇಂತಹ ಹಸಿ ಸುಳ್ಳು ಹೇಳುವ ಆತ್ಮವಂಚನೆಯ ಬದುಕು ಬಿಜೆಪಿಗರಿಗೆ ಬೇಕೇ?’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

‘ಇಡೀ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಭರಿಸುತ್ತಿರುವ 2ನೆ ರಾಜ್ಯ ಕರ್ನಾಟಕ. ಜಿಎಸ್ಟಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಅಬಕಾರಿ ಸುಂಕ, ಸೆಸ್ ಎಲ್ಲದರಲ್ಲಿಯೂ ಸಹ ನಾವು 2ನೆ ಸ್ಥಾನದಲ್ಲಿದ್ದೇವೆ. ಆದರೂ ತೆರಿಗೆ ಹಂಚಿಕೆಯಲ್ಲಿ ನಮಗೆ ಏಕೆ ಅನ್ಯಾಯ ಮಾಲಾಗುತ್ತಿದೆ? ಇದು ನಮ್ಮ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹ ಅಲ್ಲವೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News