ಯುಜಿ ನೀಟ್: ಆ.4ರಿಂದ 8ರ ವರೆಗೆ ದಾಖಲೆ ಪರಿಶೀಲನೆ

Update: 2026-08-01 21:24 IST

ಬೆಂಗಳೂರು : ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಆಯುಷ್‌ ಕೋರ್ಸ್‍ಗಳ ಪ್ರವೇಶಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದವರು ಹಾಗೂ ಇದುವರೆಗೂ ದಾಖಲೆ ಪರಿಶೀಲನೆ ಮಾಡಿಕೊಳ್ಳದವರ ದಾಖಲೆ ಪರಿಶೀಲನೆ ಆ.4ರಿಂದ ಆ.8ರ ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ನಡೆಯಲಿದೆ.

ಈ ಕುರಿತು ಪ್ರಕಟನೆ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಆ.2ರಂದು ಬಿಡುಗಡೆ ಮಾಡುವ ಲಿಂಕ್ ಮೂಲಕ ಸ್ಲಾಟ್ ಬುಕ್ ಮಾಡಿಕೊಂಡೇ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.

ಎನ್‍ಆರ್‌ ಐ ವಾರ್ಡ್, ಎನ್‍ಆರ್‌ ಐ ಮತ್ತು ಫಾರೀನ್ ನ್ಯಾಷನಲ್ಸ್ ಈ ವರ್ಗಗಳನ್ನು ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗಬೇಕು. ಸಿಇಟಿ-2026ಕ್ಕೆ ನೋಂದಣಿ ಮಾಡಿ ಪರಿಶೀಲನಾ ಸ್ಲಿಪ್ ಡೌನ್‍ಲೋಡ್ ಮಾಡಿಕೊಳ್ಳದಿರುವ ಅಭ್ಯರ್ಥಿಗಳು ಕನ್ನಡ, ಗ್ರಾಮೀಣ, ಭಾಷಾ, ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವ ದಾಖಲೆ ಪರಿಶೀಲನೆಗೆ ಬರಬೇಕು ಎಂದು ತಿಳಿಸಿದ್ದಾರೆ.

ಹೊಸದಾಗಿ ನೋಂದಣಿ ಮಾಡಿ ಕನ್ನಡ, ಗ್ರಾಮೀಣ, ಭಾಷಾ, ಧಾರ್ಮಿಕ ಅಲ್ಪಸಂಖ್ಯಾತ ಕ್ಲೇಮ್ ಮಾಡಿರುವ ಅಭ್ಯರ್ಥಿಗಳು ಪರಿಶೀಲನೆಗೆ ಬರಬೇಕು. ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು (ಕ್ಯಾಟಗರಿ-2ರಿಂದ ಕ್ಯಾಟಗರಿ-8ರ ವರೆಗೆ) ಕ್ಲೇಮ್ ಮಾಡಿರುವ ಎಲ್ಲ ಅಭ್ಯರ್ಥಿಗಳು, ಕೋರಮಂಗಲದ ಅದೇ ಕಾಲೇಜಿನಲ್ಲಿ ಆ.4ರಿಂದ 8ರವರೆಗೆ ನಡೆಯುವ ದಾಖಲೆ ಪರಿಶೀಲನೆಗೆ ಹಾಜರಾಗಬೇಕು. ಕ್ಯಾಟಗರಿ-ಆರ್‍ಸಿ1 ಮತ್ತು ಕ್ಯಾಟಗರಿ ಆರ್‍ಸಿ-9 ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಬರುವ ಅಗತ್ಯ ಇಲ್ಲ ಎಂದು ಅವರು ವಿವರಿಸಿದ್ದಾರೆ.

ಅಭ್ಯರ್ಥಿಗಳು ತಮ್ಮ ಕ್ಲೇಮ್ ಪ್ರಕಾರ ಮೂಲ ದಾಖಲೆಗಳ ಸಮೇತ ಪರಿಶೀಲನೆಗೆ ಹಾಜರಾಗಬೇಕು. ವಿವರಗಳಿಗೆ ಕೆಇಎ ವೆಬ್‍ಸೈಟ್ ವೀಕ್ಷಿಸಬೇಕು ಎಂದು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News