×
Ad

2025ರ UPSC ಅಂತಿಮ ಫಲಿತಾಂಶ | ಕರ್ನಾಟಕಕ್ಕೆ ಕಿರಣ್ ಕಾಮತೆ ಟಾಪರ್, ರಾಜ್ಯದ 22 ಅಭ್ಯರ್ಥಿಗಳು ತೇರ್ಗಡೆ

Update: 2026-03-06 20:18 IST

Photo Credit : NDTV

ಬೆಂಗಳೂರು : ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್‍ಸಿ) 2025-26ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ(ಸಿಎಸ್‍ಇ) ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕ ರಾಜ್ಯದ ಒಟ್ಟು 22 ಮಂದಿ ಅಭ್ಯರ್ಥಿಗಳು ಐಎಎಸ್, ಐಪಿಎಸ್, ಐಎಫ್‍ಎಸ್ ಸೇರಿ ವಿವಿಧ ಕೇಂದ್ರ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಕಿರಣ್ ಕಮತೆ ಅವರು ಅಖಿಲ ಭಾರತ ಮಟ್ಟದಲ್ಲಿ 53ನೇ ರ್ಯಾಂಕ್ ಪಡೆದಿದ್ದು, ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದಾರೆ. 82ನೇ ರ್ಯಾಂಕ್ ಪಡೆದ ಸಂದೀಪ್ ಬಡಾದ್ ಅವರು ರಾಜ್ಯಕ್ಕೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಶ್ರೇಯಾಂಶ್ ಗೋಮ್ಸ್ 169ನೇ ರ್ಯಾಂಕ್‍ನಲ್ಲಿದ್ದು, ರಾಜ್ಯಕ್ಕೆ ಮೂರನೇ ಸ್ಥಾನದಲ್ಲಿದ್ದಾರೆ. ಚಿನ್ಮಯೀ ಪಿ. 310ನೇ ರ್ಯಾಂಕ್‍ನಲ್ಲಿದ್ದು, ರಾಜ್ಯಕ್ಕೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಹಾಸನ ಜಿಲ್ಲೆಯ ಮನೋಜ್ ಜಿ. ಎಸ್. 389ನೇ ರ್ಯಾಂಕ್, ಕೋಲಾರ ಜಿಲ್ಲೆಯ ಎ. ಮಧು 436ನೇ ರ್ಯಾಂಕ್, ವರುಣ್ ಗೌಡ ಪಿ. 462ನೇ ರ್ಯಾಂಕ್, ಯಾದಗಿರಿ ಜಿಲ್ಲೆಯ ನಿವೇದಿತಾ ಸಿ. ಭಾವಿಮಣಿ 469ನೇ ರ್ಯಾಂಕ್, ವಿಶಾಖ ಕದಂ 504ನೇ ರ್ಯಾಂಕ್, ಸೂರಜ್ ಕೆ.ಎಲ್. 525ನೇ ರ್ಯಾಂಕ್‍ನಲ್ಲಿದ್ದಾರೆ.

ನಾಗಮಂಗಲದ ಧನಂಜಯ ಆರ್. 554ನೇ ರ್ಯಾಂಕ್, ಉಲ್ಲಾಸ್ ಎಂ. ಎಸ್. 556ನೇ ರ್ಯಾಂಕ್, ಮುತ್ತೇಶ್ ಗೌಡ ಎ. ಎಸ್. 622ನೇ ರ್ಯಾಂಕ್, ಸಾಗರ್ ಎ. 641ನೇ ರ್ಯಾಂಕ್, ಪಾಂಡುರಂಗ ಎಸ್. ಕಂಬಳಿ 660ನೇ ರ್ಯಾಂಕ್, ಚಂದನ್ ವೈ 661ನೇ ರ್ಯಾಂಕ್ ಪಡೆದಿದ್ದಾರೆ.

ಯಾದಗಿರಿ ಜಿಲ್ಲೆಯ ಬಸವರಾಜ್ ಎಂ. ಜವಳಿ 664ನೇ ರ್ಯಾಂಕ್, ಚಿಕ್ಕಮಗಳೂರು ಜಿಲ್ಲೆಯ ಪ್ರವೀಣಾ ಎಚ್.ಟಿ. 720ನೇ ರ್ಯಾಂಕ್, ಯತೀಶ್ ಎಂ.ಎ. 732ನೇ ರ್ಯಾಂಕ್, ಬೆಳಗಾವಿ ಜಿಲ್ಲೆಯ ಬಸವರಾಜ್ ಎಂ. ಪಾಟೀಲ್ 739ನೇ ರ್ಯಾಂಕ್, ಅನಿರುದ್ಧ್ ಕಟ್ಟಿಮನಿ 786ನೇ ರ್ಯಾಂಕ್, ಚಂದ್ರಶೇಖರ್ 880ನೇ ರ್ಯಾಂಕ್ ಪಡೆದಿದ್ದಾರೆ.

ಕಿರಣ್ ಕಾಮತೆ ರಾಜ್ಯಕ್ಕೆ ಪ್ರಥಮ: ‘ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ಯುವಕ ಕಿರಣ್ ಕಾಮತೆ ಅವರು ಯುಪಿಎಸ್‍ಸಿ ನಡೆಸಿದ ಸಿಎಸ್‍ಇ ಪರೀಕ್ಷೆಯಲ್ಲಿ 53ನೇ ರ್ಯಾಂಕ್ ಪಡೆದಿದ್ದು, ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಅವರು ಹಲವು ವರ್ಷಗಳಿಂದ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಪ್ರಸ್ತುತ ಅವರು ಬೆಂಗಳೂರಿನ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವೆಯಲ್ಲಿದ್ದುಕೊಂಡು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಅವರು, ಈಗ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News