×
Ad

ಡಿಕೆಶಿ ತನಿಖೆಯ ಆದೇಶ ಹಿಂದೆಗೆತ; ಹೈಕೋರ್ಟ್‌ ಆದೇಶ ಸ್ವಾಗತಾರ್ಹ: ಜಿ. ಪರಮೇಶ್ವರ್

Update: 2023-11-29 15:37 IST

ತುಮಕೂರು: ಡಿಕೆ ಶಿವಕುಮಾರ್ ಅವರ ತನಿಖೆಯ ಆದೇಶವನ್ನು ವಾಪಸ್ಸು ಪಡೆದಿರುವುದನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಸ್ವಾಗತಿಸಿದ್ದಾರೆ.

 ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಸುದ್ಡಿದಿಗಾರರೊಂದಿಗೆ ಮಾತನಾಡಿದ ಅವರು,  ಸರ್ಕಾರದ ನಿರ್ಧಾರವನ್ನು  ಹೈಕೋರ್ಟ್ ಎತ್ತಿ ಹಿಡಿದಿದೆ. ನಾವು ಅದನ್ನೇ ಬಯಸಿದ್ದೆವು. ಹಿಂದೆ ಇದ್ದ ಬಿಜೆಪಿ ಸರ್ಕಾರ ತಪ್ಪು ಮಾಡಿದೆ ಎಂದರು.

ಸ್ಪೀಕರ್ ಅನುಮತಿ ಇಲ್ಲದೆ ಪ್ರಕರಣ ಸಿಬಿಐಗೆ ಕೊಟ್ಟಿದ್ದರಿಂದ  ಕೇಸ್ ವಾಪಸ್ ಪಡೆದಿದ್ದೇವೆ. ಸರ್ಕಾರದ ಆದೇಶವನ್ನು ಹೈಕೋರ್ಟ್ ಗೆ ಕಮ್ಯುನಿಕೇಟ್ ಮಾಡಿದ್ದೇವೆ. ಅದಕ್ಕೆ ರಿಲೀಫ್ ಸಿಕ್ಕಿದೆ ಅಂದ್ರೆ, ಬಹಳ ಸಂತೋಷ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News