×
Ad

ಮೆಟಾ ಸಿಇಒ ಝುಕರ್ ಬರ್ಗ್ ಬಳಸುವ ಸ್ಮಾರ್ಟ್ ಫೋನ್‌ ಯಾವುದು ಗೊತ್ತೇ?

Update: 2023-08-03 18:57 IST

ಗ್ರಾಹಕರಾಗಿ ಜನತೆ ಐಫೋನ್ ಮತ್ತು ವಿಶ್ವದ ಸ್ಯಾಮ್ಸಂಗ್‍ಗಳನ್ನು ಬಳಸಬಹುದು. ಆದರೆ ಸ್ಮಾರ್ಟ್‍ಫೋನ್ ಬಳಕೆದಾರರ ಕುತೂಹಲಕಾರಿ ಪ್ರಶ್ನೆಯೆಂದರೆ, ಸಿಲಿಕಾನ್ ವ್ಯಾಲಿ ಸಿಇಒಗಳು ಯಾವ ಫೋನ್ ಬಳಸುಯತ್ತಾರೆ ಎನ್ನುವ ಕುತೂಹಲ ಸಹಜವಾಗಿಯೇ ಇರುತ್ತದೆ. ಟಿಮ್ ಕುಕ್, ಸುಂದರ್ ಪಿಚೈ, ಮೆಟಾ ಸಿಇಒ ಮಾರ್ಕ್ ಝುಕರ್ ಬರ್ಗ್ ಅವರಂಥವರು ಬಳಸುವ ಮೊಬೈಲ್ ಯಾವುದು ಎನ್ನುವುದು ಯಕ್ಷಪ್ರಶ್ನೆ.

ಕೆಲ ವರ್ಷಗಳ ಹಿಂದೆ ಝುಕರ್ ಬರ್ಗ್ ಆ್ಯಂಡ್ರಾಯ್ಡ್ ಒಎಸ್ ಬಗ್ಗೆ ಒಲವು ವ್ಯಕ್ತಪಡಿಸಿದ್ದರು ಮತ್ತು ಸ್ಯಾಮ್ಸಂಗ್ ಸ್ಮಾರ್ಟ್‍ಫೋನ್ ಬಳಸುವುದಾಗಿ ಬಹಿರಂಗಪಡಿಸಿದ್ದರು. 2020ರಲ್ಲಿ ಅವರಿಗೆ ಯೂಟ್ಯೂಬರ್ ಮಾರ್ಕೆಸ್ ಬ್ರೋನ್ಲಿಯಿಂದ ಒಂದು ಕರೆ ಬಂತು. ಜೇಬಿನಲ್ಲಿ ಯಾವ ಮೊಬೈಲ್ ಇದೆ ಎಂಬ ಪ್ರಶ್ನೆ ಬಂದಾಗ, ಕಳೆದ ಕೆಲ ವರ್ಷಗಳಿಂದ ನಾನು ಸ್ಯಾಮ್ಸಂಗ್ ಫೋನ್ ಬಳಸುತ್ತಿದ್ದೇನೆ ಎನ್ನುವುದು ನಿಮಗೆ ತಿಳಿದಿರಬೇಕು. ಅವುಗಳ ಅಭಿಮಾನಿ ನಾನು. ಅವರು ಉತ್ತಮ ಫೋನ್‍ಗಳನ್ನು ನಿರ್ಮಿಸುತ್ತಿದ್ದಾರೆ ಎನ್ನುವುದು ನನ್ನ ಭಾವನೆ" ಎಂದಿದ್ದರು.

ಇನ್‍ಸ್ಟಾಗ್ರಾಂ ಮುಖ್ಯಸ್ಥ ಆಡಂ ಮೊಸ್ಸೆರಿಯವರ ಪ್ರಕಾರ, ಆ್ಯಂಡ್ರಾಯ್ಡ್‍ಗಳು ಐಓಎಸ್‍ಗಿಂತ ಉತ್ತಮ. ಆದರೆ ಝುಕರ್ ಬರ್ಗ್ ತಾವು ಬಳಸುವ ಮಾಡೆಲ್ ಯಾವುದು ಎನ್ನುವುದನ್ನು ಬಹಿರಂಗಪಡಿಸಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News