ಮ್ಯಾಪಲ್ಸ್ ಆ್ಯಪ್ ನಲ್ಲಿ ಬಹು ಹಂತದ ಸಾರ್ವಜನಿಕ ಸಾರಿಗೆ ಅಪ್ಡೇಟ್
ಸಾಂದರ್ಭಿಕ ಚಿತ್ರ | Photo Credit : freepik
ಮ್ಯಾಪ್ ಮೈ ಇಂಡಿಯಾ ತನ್ನ ನೇವಿಗೇಶನ್ ಆ್ಯಪ್ ಮ್ಯಾಪಲ್ಸ್ ನಲ್ಲಿ ಅತಿದೊಡ್ಡ ಅಪ್ಡೇಟ್ ಮಾಡಿದೆ. ಇದೀಗ ಬಳಕೆದಾರರು ಬಸ್ ಗಳು, ಮೆಟ್ರೊಗಳು ಮತ್ತು ರೈಲುಗಳ ವಿವರವನ್ನೂ ಮ್ಯಾಪಲ್ಸ್ ಆ್ಯಪ್ ನಲ್ಲಿ ಪಡೆದುಕೊಳ್ಳಬಹುದು.
ಮ್ಯಾಪ್ ಮೈ ಇಂಡಿಯಾ ತನ್ನ ನೇವಿಗೇಶನ್ ಆ್ಯಪ್ ಮ್ಯಾಪಲ್ಸ್ ಗೆ ಅತಿದೊಡ್ಡ ಅಪ್ಡೇಟ್ ಅನ್ನು ಮಾಡಿದೆ. ಬಳಕೆದಾರರು ಇನ್ನು ಮುಂದೆ ಭಾರತದ ಸಾರ್ವಜನಿಕ ಸಾರಿಗೆಯ ವಿವರಗಳನ್ನು ನೇರವಾಗಿ ಆ್ಯಪ್ ನಲ್ಲಿ ಪಡೆದುಕೊಳ್ಳಬಹುದು. ಹೀಗಾಗಿ ಅದು ಗೂಗಲ್ ಮ್ಯಾಪ್ಸ್ ಗೆ ಒಂದು ಹೆಜ್ಜೆ ಸಮೀಪಕ್ಕೆ ತಲುಪಿದೆ.
ಮ್ಯಾಪಲ್ಸ್ ಆ್ಯಪ್ ನ ಹೊಸ ಅಪ್ಡೇಟ್ ನಂತರ ಬಹು ಹಂತದ ಸಾರ್ವಜನಿಕ ಸಾರಿಗೆಯ ದಾರಿಯನ್ನು ಆ್ಯಪ್ ನಲ್ಲಿ ಪಡೆಯಬಹುದು.
ಈ ಅಪ್ಡೇಟ್ ನಂತರ ಬಳಕೆದಾರರು ಮೆಟ್ರೊ, ರೈಲು ಮತ್ತು ಬಸ್ ದಾರಿಗಳನ್ನು ನೇರವಾಗಿ ಆ್ಯಪ್ ಒಳಗೆ ಪಡೆಯಬಹುದು. ಬಳಕೆದಾರರ ಪ್ರಯಾಣದ ಯೋಜನೆಯನ್ನು ಸರಳಗೊಳಿಸಲು ಕಂಪನಿ ಈ ಅಪ್ಡೇಟ್ ಮಾಡಿರುವುದಾಗಿ ಹೇಳಿಕೊಂಡಿದೆ.
ಹಲವು ಸಾರಿಗೆ ವ್ಯವಸ್ಥೆಗಳಲ್ಲಿ ಚಲಿಸುವವರಿಗೆ ಒಟ್ಟಾಗಿ ಮಾಹಿತಿ ಇರಲಿಲ್ಲ. ಇದೀಗ ಆ್ಯಪ್ ಅಪ್ಡೇಟ್ ನಂತರ ದಾರಿಯ ಮಾಹಿತಿಯನ್ನು ನೀಡುವ ಜೊತೆಗೆ ಹಲವು ಸಾರಿಗೆ ವ್ಯವಸ್ಥೆಗಳಲ್ಲಿ ಪ್ರಯಾಣಿಸುವವರಿಗೆ ದಾರಿ ಸುಲಭಗೊಳಿಸಿದೆ. ಪ್ರಯಾಣಿಕರು ಇದೀಗ ಪ್ರತ್ಯೇಕ ಆ್ಯಪ್ ಅಥವಾ ವೆಬ್ತಾಣಕ್ಕೆ ಹೋಗಿ ಹಲವು ಸಾರಿಗೆ ವ್ಯವಸ್ಥೆಯನ್ನು ಪರಿಶೀಲಿಸುವ ಅಗತ್ಯವಿಲ್ಲ. ಮ್ಯಾಪಲ್ಸ್ ಆ್ಯಪ್ನ ಮಾಹಿತಿಯಲ್ಲಿ ಸಾರ್ವಜನಿಕ ಸಾರಿಗೆ ದಾರಿಗಳು, ನಿಲ್ದಾಣಗಳು, ಮತ್ತು ಬದಲಿಸಬೇಕಾದ ಪಾಯಿಂಟ್ ಗಳ ವಿವರವನ್ನು ಕಾಣಬಹುದಾಗಿದೆ.
ಮ್ಯಾಪಲ್ಸ್ ಸಾರ್ವಜನಿಕ ಸಾರಿಗೆ ಫೀಚರ್ ಲಭ್ಯತೆ
ಪ್ರಸ್ತುತ ಬಹುಹಂತದ ಸಾರ್ವಜನಿಕ ಸಾರಿಗೆ ಫೀಚರ್ ಪ್ರಮುಖ ನಗರಗಳಲ್ಲಿ ಮಾತ್ರ ಲಭ್ಯವಿದೆ. ಚಂಡೀಗಢ, ಪುಣೆ, ಕೋಲ್ಕತ್ತಾ, ಅಹಮದಾಬಾದ್, ನಾಗಪುರ, ಇಂದೋರ್, ಪಾಟ್ನಾ, ಲಖನೌ, ಕಾನ್ಪುರ, ಆಗ್ರಾ, ಜೈಪುರ, ಕೊಚ್ಚಿ ಮತ್ತು ಭೋಪಾಲ್ಗಳಲ್ಲಿ ಲಭ್ಯವಿವೆ. ಮ್ಯಾಪಲ್ ಪ್ರಕಾರ iOS ಮತ್ತು ವೆಬ್ ಮೂಲಕ ಆ್ಯಪ್ ಅನ್ನು ಪರಿಶೀಲಿಸಬಹುದಾಗಿದೆ. ಶೀಘ್ರವೇ ಆಂಡ್ರಾಯ್ಡ್ ಮೊಬೈಲ್ಗಳಲ್ಲೂ ಆ್ಯಪ್ ಸಿಗಲಿದೆ.
ಮ್ಯಾಪ್ ಮೈ ಇಂಡಿಯಾ ಸಾರಿಗೆ ಪ್ರಾಧಿಕಾರಗಳ ಜೊತೆಗೆ ಸಹಯೋಗವನ್ನು ಮುಂದುವರಿಸುವುದಾಗಿ ಹೇಳಿದೆ. ಸಾರ್ವಜನಿಕ ಸಾರಿಗೆಯ ವ್ಯಾಪ್ತಿಯನ್ನು ವೃದ್ಧಿಸಲು ಮತ್ತು ನಗರಗಳಲ್ಲಿ ದತ್ತಾಂಶ ನಿಖರತೆಯನ್ನು ನೀಡಲು ಸಂಬಂಧಿತ ಸಂಸ್ಥೆಗಳ ಜೊತೆಗೆ ಸಹಯೋಗ ಮಾಡಿಕೊಳ್ಳಲಿದೆ.
ಮ್ಯಾಪಲ್ ಈಗಾಗಲೇ ತಿರುವಿನಿಂದ ತಿರುವಿನ ನೇವಿಗೇಶನ್, ನೈಜ ಟ್ರಾಫಿಕ್ ಅಪ್ಡೇಟ್ ಗಳು, ಸುರಕ್ಷಾ ಎಚ್ಚರಿಕೆಗಳು ಮತ್ತು ಚತುರ ದಾರಿ ತೋರಿಸುವ ವ್ಯವಸ್ಥೆಯನ್ನು ಹೋಂದಿದೆ. ಸಾರ್ವಜನಿಕ ಸಾರಿಗೆ ಮಾಹಿತಿ ಲಭ್ಯವಿರುವಂತೆ ಮಾಡುವ ಮೂಲಕ ರಸ್ತೆಯಲ್ಲಿ ದಟ್ಟಣೆಯನ್ನು ತೆಗೆದು ಹಾಕಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸುವಂತಾಗಲು ಉತ್ತಮ ಸೇವೆಯನ್ನು ಒದಗಿಸುವುದಾಗಿ ಕಂಪನಿ ಹೇಳಿದೆ.
40 ದಶಲಕ್ಷ ಬಳಕೆದಾರರು
ಮ್ಯಾಪಲ್ಸ್ ಆ್ಯಪ್ ಅನ್ನು 40 ದಶಲಕ್ಷ ಬಳಕೆದಾರರು ಬಳಸುತ್ತಾರೆ. ಹೀಗಾಗಿ ಅದು ಭಾರತದಲ್ಲಿ ನೇವಿಗೇಶನ್ ಕ್ಷೇತ್ರದಲ್ಲಿ ಪ್ರಬಲವಾಗಿ ಬೆಳೆಯುತ್ತಿದೆ. ಗೂಗಲ್ ದತ್ತಾಂಶದ ಪ್ರಕಾರ 2023ರಲ್ಲಿ ಗೂಗಲ್ ಮ್ಯಾಪ್ಸ್ ಅನ್ನು 60 ದಶಲಕ್ಷ ಸಕ್ರಿಯ ಬಳಕೆದಾರರು ಬಳಸುತ್ತಿದ್ದರು.
ಮ್ಯಾಪ್ ಮೈ ಇಂಡಿಯಾ ರಾಷ್ಟ್ರೀಯ ಆದ್ಯತೆಗಳು ಮತ್ತು ಸ್ಥಳೀಯ ಸೂಕ್ಷ್ಮಗಳಿಗೆ ಬದ್ಧವಾಗಿರಲು ಒತ್ತು ನೀಡುವುದಾಗಿ ಹೇಳಿದೆ. ಕಂಪನಿಯ ಪ್ರಕಾರ ಮ್ಯಾಪಲ್ಸ್ ನ ಸರ್ಕಾರಿ ವ್ಯವಹಾರವು ಇತ್ತೀಚೆಗಿನ ವರ್ಷಗಳಲ್ಲಿ ತ್ವರಿತ ಬೆಳವಣಿಗೆ ಕಂಡಿದೆ. ಈಗ ಅದರ ಒಟ್ಟು ಆದಾಯದ ಶೇ 20ರಷ್ಟು ಪಾಲನ್ನು ಹೊಂದಿದೆ. ಇದಕ್ಕೆ ಬಾಗಶಃ ಸ್ಥಳೀಯ ನಕ್ಷೆ ಮತ್ತು ಅನುಸರಣೆಯ ಮೇಲೆ ಗಮನಹರಿಸಿರುವುದು ಕಾರಣವಾಗಿದೆ.