×
Ad

ಗೂಗಲ್‌ನ ಪ್ರಾಜೆಕ್ಟ್ ಜೀನಿ! ಏನಿದು ಗೂಗಲ್‌ನ ಹೊಸ ಎಐ ಸೃಷ್ಟಿ?

Update: 2026-02-02 15:27 IST

Screengrab : X 

ಪ್ರಾಜೆಕ್ಟ್ ಜೀನಿ ಎಂಬುದು ಗೂಗಲ್ ಡೀಪ್‌ಮೈಂಡ್ ಅಭಿವೃದ್ಧಿಪಡಿಸುತ್ತಿರುವ ಹೊಸ ಜನರೇಟಿವ್ ಎಐ ಸಂಶೋಧನಾ ಮಾದರಿಯಾಗಿದೆ. ಪಠ್ಯ ಅಥವಾ ಚಿತ್ರಗಳ ಮೂಲಕ ಸಂವಾದಾತ್ಮಕ 2ಡಿ ವರ್ಚುವಲ್ ಜಗತ್ತುಗಳನ್ನು ಸೃಷ್ಟಿಸಬಹುದು.

ಗೂಗಲ್ ಪ್ರಾಜೆಕ್ಟ್ ಜೀನಿ ಎನ್ನುವ ಹೊಸ ಎಐ ಟೂಲ್ ಬಿಡುಗಡೆ ಮಾಡಿದೆ. ಅದರಲ್ಲಿ ಬಳಕೆದಾರರಿಗೆ ತಮ್ಮದೇ ಆದ ಸಂವಾದ ನಡೆಸುವ ಪ್ರಪಂಚಗಳನ್ನು ರಚಿಸಲು ಅನುವು ಮಾಡಿಕೊಡಲಾಗಿದೆ. ಇದು ಎಐ ಚಾಲಿತ ವೆಬ್ ಆ್ಯಪ್ ಆಗಿರುತ್ತದೆ. ಅದರಲ್ಲಿ ನಿಮ್ಮ ಸೃಜನಶೀಲತೆಯನ್ನು ಬಳಸಿ ಹೊಸ ಜಗತ್ತನ್ನು ಸೃಷ್ಟಿಸಬಹುದು. ನೀವು ಅದನ್ನು ನೋಡುವುದು ಮಾತ್ರವಲ್ಲದೆ ಅನ್ವೇಷಣೆಯನ್ನೂ ಮಾಡಬಹುದಾಗಿದೆ. ಗೂಗಲ್ ಮುಖ್ಯಸ್ಥರಾದ ಸುಂದರ್ ಪಿಚಾಯ್ ಸ್ವತಃ ಇದನ್ನು ಮೇಲ್ವಿಚಾರಣೆ ಮಾಡುತ್ತಿದ್ದು, “ಔಟ್ ಆಫ್ ದ ವರ್ಲ್ಡ್” (ಅತ್ಯಂತ ಹೊಸ ಪ್ರಪಂಚ) ಎಂದು ಕರೆದಿದ್ದಾರೆ.

ಈ ಬಗ್ಗೆ ‘ಎಕ್ಸ್‌’ ಸಾಮಾಜಿಕ ಜಾಲತಾಣದಲ್ಲಿ ಸುಂದರ್ ಪಿಚಾಯ್ ಸ್ವತಃ ಅಪ್ಲಿಕೇಶನ್ ಬಿಡುಗಡೆಯನ್ನು ಘೋಷಿಸಿದ್ದಾರೆ. ಪ್ರಾಜೆಕ್ಟ್ ಜೀನಿ ಎಂಬುದು ಗೂಗಲ್ ಡೀಪ್‌ಮೈಂಡ್ ಅಭಿವೃದ್ಧಿಪಡಿಸುತ್ತಿರುವ ಹೊಸ ಜನರೇಟಿವ್ ಎಐ ಸಂಶೋಧನಾ ಮಾದರಿಯಾಗಿದೆ. ಪಠ್ಯ ಅಥವಾ ಚಿತ್ರಗಳ ಮೂಲಕ ಇಂಟರ್ಯಾಕ್ಟಿವ್ (ಸಂವಾದಾತ್ಮಕ) 2ಡಿ ವರ್ಚುವಲ್ ಜಗತ್ತುಗಳನ್ನು ಸೃಷ್ಟಿಸಲಾಗುತ್ತಿದೆ. ಇದು ಬಳಕೆದಾರರು ರಚಿಸಿದ ಪರಿಸರದಲ್ಲಿ ರಿಯಲ್ ಟೈಮ್ ಪರಿಶೋಧನೆ ಮತ್ತು ಆಟದ ಅನುಭವ ನೀಡುತ್ತದೆ. ಇದು ಪ್ರಸ್ತುತ ಪ್ರಾಯೋಗಿಕ ಹಂತದಲ್ಲಿದ್ದು, ಗೂಗಲ್ ಲ್ಯಾಬ್ಸ್ ಮೂಲಕ ಲಭ್ಯವಿದೆ.

‘ಎಕ್ಸ್‌’ನಲ್ಲಿ ಸುಂದರ್ ಪಿಚಾಯ್ ಅವರು ಹೇಳಿರುವ ಪ್ರಕಾರ, ಪ್ರಾಜೆಕ್ಟ್ ಜೀನಿಯು ಎಐ ವರ್ಲ್ಡ್ ಜನರೇಶನ್ ಮಾಡೆಲ್ ಆಗಿರುವ ಜೀನಿ 3ರಿಂದ ಶಕ್ತಿಪಡೆದಿದೆ. ಜೀನಿ 3, ನ್ಯಾನೋ ಬನಾನಾ ಪ್ರೊ + ಜೆಮಿನಿಯಿಂದ ಶಕ್ತಿ ಪಡೆದಿರುವ ಪ್ರೋಟೋಟೈಪ್ ವೆಬ್ ಆಗಿರುತ್ತದೆ. ಅದು ನಿಮ್ಮದೇ ಆದ ಸಂವಾದಾತ್ಮಕ ಜಗತ್ತನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ.

ಪ್ರಾಜೆಕ್ಟ್ ಜೀನಿ ಮೂಲಕ ಗಗನಯಾನಿಗಳು ಭೂಮಿಯ ಕಕ್ಷೆಯಲ್ಲಿ ಬಾಹ್ಯಾಕಾಶವನ್ನು ಸಂಶೋಧನೆ ಮಾಡುವ ಕ್ಲಿಪ್ ಒಂದನ್ನು ಸುಂದರ್ ಪಿಚಾಯ್ ಹಂಚಿಕೊಂಡಿದ್ದಾರೆ. “ನಾನು ಬಹಳ ಸಮಯದಿಂದ ಇದರೊಂದಿಗೆ ಆಡುತ್ತಿದ್ದೇನೆ, ಇದು ಅದ್ಭುತ ಪ್ರಪಂಚವಾಗಿದೆ” ಎಂದು ಅವರು ಬರೆದಿದ್ದಾರೆ.

ಪ್ರಾಜೆಕ್ಟ್ ಜೀನಿಯಲ್ಲಿ ನಿಮ್ಮದೇ ಜಗತ್ತನ್ನು ಹೇಗೆ ಸೃಷ್ಟಿಸುವುದು?

ಪ್ರಾಜೆಕ್ಟ್ ಜೀನಿ ಇತರ ಯಾವುದೇ ಎಐ ಟೂಲ್‌ಗಳ ರೀತಿಯಲ್ಲೇ ಕೆಲಸ ಮಾಡುತ್ತದೆ. ಮೊದಲ ಹೆಜ್ಜೆ ‘ವರ್ಲ್ಡ್ ಸ್ಕೆಚಿಂಗ್’ ಆಗಿರುತ್ತದೆ. ನೀವು ಪ್ರಾಂಪ್ಟ್‌ಗಳು ಅಥವಾ ಚಿತ್ರಗಳನ್ನು ನೀಡಬೇಕಾಗುತ್ತದೆ. ಎಐ ಈ ಮಾಹಿತಿಯನ್ನು ಬಳಸಿಕೊಂಡು ಪರಿಸರ ಅಥವಾ ಪಾತ್ರಗಳನ್ನು ಮಾತ್ರ ಸೃಷ್ಟಿಸುವುದಲ್ಲ, ಕಸ್ಟಮ್ ಜಗತ್ತುಗಳನ್ನೂ ಸೃಷ್ಟಿಸಿಕೊಡುತ್ತದೆ. ಚಿತ್ರಗಳು ನೈಜ ಜಗತ್ತಿನ ವಸ್ತುಗಳಾಗಿದ್ದರೂ ನಡೆಯುತ್ತದೆ. ಗೂಗಲ್ ನ್ಯಾನೋ ಬನಾನಾ ಪ್ರೊವನ್ನು ಪ್ರಾಜೆಕ್ಟ್ ಜೀನಿ ಜೊತೆಗೆ ಇಂಟಗ್ರೇಟ್ ಮಾಡುವ ಮೂಲಕ ಉತ್ತಮ ವಿಶುವಲ್‌ಗಳು ಸಿಗುವಂತೆ ಮಾಡಿದೆ.

ಒಮ್ಮೆ ಜಗತ್ತು ಸಿದ್ಧವಾದರೆ ಬಳಕೆದಾರರು ಅದನ್ನು ಪರಿಶೀಲಿಸಬಹುದು ಮತ್ತು ಪರಿಸರದ ಜೊತೆಗೆ ವಿಭಿನ್ನ ಆಯಾಮದಲ್ಲಿ ಸಂಪರ್ಕಿಸಬಹುದು. ಫಸ್ಟ್ ಪರ್ಸನ್ ವ್ಯೂ ಅಥವಾ ಥರ್ಡ್ ಪರ್ಸನ್ ವ್ಯೂನಲ್ಲಿಯೂ ಹೋಗಬಹುದಾಗಿದೆ. ನೀವು ನಿಮ್ಮ ಕಸ್ಟಮ್ ವರ್ಲ್ಡ್ ಅನ್ನು ಅನ್ವೇಷಿಸುತ್ತಾ ಹೋದಂತೆ, ನೀವು ರಿಯಲ್ ಟೈಮ್‌ನಲ್ಲಿ ನ್ಯಾವಿಗೇಟ್ ಮಾಡುತ್ತಿದ್ದಂತೆ ಎಐ ಅದನ್ನು ಜನರೇಟ್ ಮಾಡುತ್ತಾ ಹೋಗುತ್ತದೆ. ಈ ಮಾದರಿಯು ಭೌತಶಾಸ್ತ್ರ ಮತ್ತು ಪರಸ್ಪರ ಕ್ರಿಯೆಗಳನ್ನು ಅನುಕರಿಸಿ ವಾಸ್ತವಿಕ ಅನುಭವವನ್ನು ಸೃಷ್ಟಿಸುತ್ತದೆ ಎಂದು ಗೂಗಲ್ ಹೇಳಿದೆ.

ನೀವು ಜಗತ್ತುಗಳನ್ನು ರಿಮಿಕ್ಸ್ ಕೂಡ ಮಾಡಬಹುದು. ವೇದಿಕೆಯಲ್ಲಿ ಲಭ್ಯವಿರುವ ಜಗತ್ತುಗಳಿಂದ ನೀವು ಆರಿಸಿಕೊಳ್ಳಬಹುದು, ಕಸ್ಟಮ್ ಪ್ರಾಂಪ್ಟ್‌ಗಳನ್ನು ನೀಡಿ ಅವುಗಳನ್ನು ಮಾರ್ಪಡಿಸಬಹುದು. ಆದರೆ ಜನರೇಟ್ ಮಾಡಿದ ಜಗತ್ತನ್ನು 60 ಸೆಕೆಂಡುಗಳ ಕಾಲ ಮಾತ್ರ ಅನ್ವೇಷಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News